ಡಾ. ಬಸವರಾಜ ಸಾದರ ಅವರ ‘ಮುಖವಾಡದ ಮರೆಯ ಅಸಲಿ ಮುಖ’ ಲೇಖನ (ಪ್ರ.ವಾ., ಸೆ. 25) ಸಕಾಲಿಕವಾಗಿದೆ. ಹಿರಿಯ ಕಲಾವಿದರಾದ ಡಾ. ರಾಜ್ಕುಮಾರ್ ಹಾಗೂ ಏಣಗಿ ಬಾಳಪ್ಪ ಅವರ ಪ್ರಸ್ತಾಪ ಮೌಲಿಕವಾಗಿದೆ. ಅವರಿಬ್ಬರೂ ಪಾತ್ರದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಆದರ್ಶಪ್ರಾಯರಾಗಿದ್ದರು. ಅವರನ್ನು ನೋಡಿದರೆ ಗೌರವ ಭಾವನೆ ಮೂಡುತ್ತಿತ್ತು.

ಐದು ದಶಕಗಳ ಹಿಂದೆ ಅಂದಿನ ಯುವಕರಿಗೆ, ನಾಗರಿಕರಿಗೆ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ಇತಿಹಾಸ ಪುರುಷರು ಆದರ್ಶವಾಗಿದ್ದರು. ಕಾಲಕ್ರಮೇಣ ಯುವಕರಿಗೆ ಚಲನಚಿತ್ರ ನಟ–ನಟಿಯರೇ ಆದರ್ಶವಾದರು. ಅವರ ಹೆಸರಿನಲ್ಲಿ ಸಂಘಗಳನ್ನು ರಚಿಸಿಕೊಳ್ಳುತ್ತಾರೆ. ಇನ್ನೊಂದು ನೆಲೆಯಲ್ಲಿ, ಇತಿಹಾಸದ ಮಹಾನ್ ವ್ಯಕ್ತಿಗಳ ಹೆಸರು, ಭಾವಚಿತ್ರವನ್ನು ಜಾತಿ-ಸಮುದಾಯದ ಸಂಘಗಳಿಗೆ ಬಳಕೆ ಮಾಡಿಕೊಂಡು, ಆ ಮಹಾಪುರುಷರ ವ್ಯಕ್ತಿತ್ವವನ್ನು ಕುಗ್ಗಿಸುವ ಪ್ರಯತ್ನಗಳು ಆಗುತ್ತಿವೆ. ಇದು, ಜಾತ್ಯತೀತ ಎಂದು ಕರೆಸಿಕೊಳ್ಳುವ ರಾಷ್ಟ್ರದ ವಿಪರ್ಯಾಸ.

-ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.