ವಿಶ್ವ ಪರಿಸರ ದಿನವನ್ನು ಮೊನ್ನೆಯಷ್ಟೇ ಆಚರಿಸಿದ್ದೇವೆ. ಅಷ್ಟರಲ್ಲಾಗಲೇ, ಕೊಡಗು ಜಿಲ್ಲೆಯಲ್ಲಿ ರೆಸಾರ್ಟ್ ನಿರ್ಮಾಣಕ್ಕಾಗಿ 808 ಮರಗಳ ಮಾರಣಹೋಮಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದ್ದ ವಿಷಯ ತಿಳಿದು (ಪ್ರ.ವಾ., ಜೂನ್ 7) ಆಘಾತವಾಗಿತ್ತು. ಆದರೆ ಕೂಡಲೇ ಎಚ್ಚೆತ್ತ ಸರ್ಕಾರ, ಮರ ಕಡಿಯುವುದನ್ನು ಸ್ಥಗಿತಗೊಳಿಸಿರುವುದು ಕೊಂಚ ಸಮಾಧಾನ ತಂದಿದೆ.

ಹಿಂದಿನ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೊಡಗಿನ ಜನ ಮತ್ತು ಕಾಡಿನ ಪ್ರಾಣಿ– ಪಕ್ಷಿ ಸಂಕುಲ ಸಂಕಷ್ಟ ಅನುಭವಿಸಿದ್ದಾಗಿದೆ.

ಒಂದು ಮರ ಬೆಳೆಸಲು ಅನೇಕ ವರ್ಷಗಳು ಬೇಕಾಗುತ್ತದೆ. ಹೀಗಿರುವಾಗ, ನೂರಾರು ಗಿಡಗಳನ್ನು ಕಡಿದುರುಳಿಸುವುದು ಅತ್ಯಂತ ಹೀನ ಕೃತ್ಯ. ಅರಣ್ಯ ಇಲಾಖೆಯು ಗಿಡ ಮರಗಳ ಸಂರಕ್ಷಣೆಗೆ ಮುಂದಾಗಬೇಕೇ ಹೊರತು, ಹೀಗೆ ಅಸಹಾಯಕತೆ ತೋರುವುದಲ್ಲ.

– ವಿನಾಯಕ ಎಂ.ಎಂ.,ಹಂಪಸಾಗರ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.