‘ಹಿಂದೂ ಧರ್ಮದಲ್ಲಿ ಬುದ್ಧಿಜೀವಿಗಳು ಕಳೆಯಾಗಿದ್ದಾರೆ, ಈ ಕೊಳೆಯನ್ನು ಹಾಗೇ ಬಿಟ್ಟರೆ ಧರ್ಮದ ಕೊಲೆಯಾಗುತ್ತದೆ’ (ಪ್ರ.ವಾ., ಫೆ. 8) ಎಂಬ ಉಡುಪಿಯ ವಿಶ್ವಸಂತೋಷ ಭಾರತಿ ಸ್ವಾಮಿ ಅವರ ಅಭಿಪ್ರಾಯ ಬಾಲಿಶವಾಗಿದೆ. ಬುದ್ಧಿಜೀವಿಗಳ ಕುರಿತಾದ ಅವರ ಅಸಹನೆಯನ್ನು ಹೊರಹಾಕಿದೆ. ಬುದ್ಧಿಜೀವಿಗಳು ವೈಜ್ಞಾನಿಕ, ವೈಚಾರಿಕ ವಾದಗಳನ್ನು ಒಪ್ಪಿಕೊಂಡವರು, ಕುರುಡು ನಂಬಿಕೆಯನ್ನು ಒಪ್ಪದೆ ವಸ್ತುನಿಷ್ಠ ಪರಾಮರ್ಶೆ ಮಾಡುವವರು. ಅಂತಹವರನ್ನು ಕಳೆಗೆ ಮತ್ತು ಕೊಳೆಗೆ ಹೋಲಿಸಿರುವುದು ಸ್ವಾಮೀಜಿಅವರ ವೈಚಾರಿಕತೆಯನ್ನು ಧ್ವನಿಸುತ್ತದೆ.

ಈಗಾಗಲೇ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ಕಲಬುರ್ಗಿಯವರ ಮೇಲಿನ ದಾಳಿ ಮತ್ತು ದಾರುಣ ಹತ್ಯೆಗಳು ನಮ್ಮ ಕಣ್ಮುಂದೆ ಇರುವಾಗ, ಇಂತಹ ಹೇಳಿಕೆ ಬುದ್ಧಿಜೀವಿಗಳ ಮೇಲೆ ಮತ್ತಷ್ಟು ದಾಳಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಬುದ್ಧಿಜೀವಿಗಳ ಮಾತನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ ಎನ್ನುವ ಸತ್ಯ ಶೋಧಿಸಿದ ಸ್ವಾಮೀಜಿ ತಮ್ಮ ಮಾತಿನುದ್ದಕ್ಕೂ ಅವರ ಮೇಲೆ ಹರಿಹಾಯುವ ಬದಲು ಸುಮ್ಮನಿರಬಹುದಾಗಿತ್ತಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.