ಪಿಯುಸಿ ರಾಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಬಯಲಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಪಾಲಕರು, ಉಪನ್ಯಾಸಕರು... ಹೀಗೆ ಪರೋಕ್ಷವಾಗಿ ಇನ್ನೂ ಲಕ್ಷಾಂತರ ಮಂದಿ ತೊಂದರೆಗೆ ಒಳಗಾಗಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲಲ್ಲ, ಹಿಂದೆಯೂ ಹಲವು ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವಾಗ ಸಂಬಂಧಪಟ್ಟವರು ಯಾಕೆ ತಂತ್ರಜ್ಞಾನದ ಮೊರೆಹೋಗಿ ಬಿಗಿಯಾದ ಹೊಸ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಚಿಂತನೆ ಮಾಡಬಾರದು? ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕೈದು ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ, ಪರೀಕ್ಷೆಗಿಂತ ಕೇವಲ ಒಂದು ಗಂಟೆ ಮುಂಚಿತವಾಗಿ ಲಾಟರಿ ಮೂಲಕ ಒಂದು ಪ್ರಶ್ನೆಪತ್ರಿಕೆ ಆಯ್ಕೆ ಮಾಡಬಹುದು.

ಪ್ರತಿ ಕಾಲೇಜಿಗೂ ಒಂದು ಪಾಸ್ವರ್ಡ್ ಕೊಟ್ಟು, ಆ ಪ್ರಶ್ನೆಪತ್ರಿಕೆಯನ್ನು ಕಾಲೇಜಿನಲ್ಲೇ ಡೌನ್ಲೋಡ್ ಮಾಡಿಸಿ, ಅಲ್ಲೇ ಅದರ ಜೆರಾಕ್ಸ್ ಪ್ರತಿಗಳನ್ನು ಮಾಡಿಸಿ ಹಂಚಿದರೆ ಪ್ರಶ್ನೆಪತ್ರಿಕೆ ಬಯಲಾಗುವ ಪ್ರಮೇಯ ಇರುವುದಿಲ್ಲ. ಅಷ್ಟೇ ಅಲ್ಲ, ಒಂದು ಕಡೆ ಮುದ್ರಿಸಿ ಅವುಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ಸಾಗಿಸುವ ವೆಚ್ಚ, ಭದ್ರತೆ ಒದಗಿಸಲು ತಗಲುವ ವೆಚ್ಚ, ಪ್ರಶ್ನೆಪತ್ರಿಕೆ ಅದಲು ಬದಲಾಗುವ ಸಂಭವ ಹೀಗೆ ಎಲ್ಲವನ್ನೂ ತಪ್ಪಿಸಬಹುದು. ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಹೆಜ್ಜೆ ಇಡುವುದು ಸೂಕ್ತವಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.