ಪ್ಲೂಟೊ ಕುರಿತು ಟಿ.ಗೋವಿಂದರಾಜು ಅವರ ಪತ್ರ (ವಾ.ವಾ., ಜುಲೈ 18) ‘ಯಮಕಾಯ’ಕ್ಕೆ ನನ್ನ ಪ್ರತಿಕ್ರಿಯೆ. ಗ್ರೀಕ್ ಪುರಾಣದಲ್ಲಿ ಬರುವ ‘ಯುರೇನಸ್’ ಗಗನ ದೇವತೆ, ರೋಮನ್ ಪುರಾಣದಲ್ಲಿರುವ ‘ನೆಪ್ಚೂನ್’ ಸಮುದ್ರ ದೇವತೆ.

ಹೀಗಿದ್ದ ಮಾತ್ರಕ್ಕೆ, ಯುರೇನಸ್ ಗ್ರಹವನ್ನು ‘ಗಗನ ದೇವ’ ಎಂದೂ, ನೆಪ್ಚೂನ್ ಗ್ರಹವನ್ನು ‘ಸಮುದ್ರ ದೇವ’ ಎಂದೂ ಕರೆಯಲಾದೀತೆ? ಹೀಗೆ, ಎಲ್ಲ ನಾಮಪದಗಳಿಗೆ ಸಂವಾದಿಯಾಗಿ ಭಾರತೀಯ ಪುರಾಣದ ಹೆಸರುಗಳನ್ನು ದಯಪಾಲಿಸುತ್ತಾ ಹೋದರೆ ಆಗ ಪುರಾಣಕ್ಕೂ ವಿಜ್ಞಾನಕ್ಕೂ ಅಂತರವಿರುವುದಿಲ್ಲ! ವಿದ್ಯಾರ್ಥಿಗಳು ಅನವಶ್ಯಕ ಗೊಂದಲಕ್ಕೆ ಈಡಾಗುತ್ತಾರೆ. ಸುಲಿಗೆಗಾರ ಫಲಜ್ಯೋತಿಷಿಗಳು ‘ಯಮ’ನ ಹೆಸರು ಹೇಳಿ, ಇಲ್ಲದ ಭಯ ಹುಟ್ಟಿಸಿ, ಅಮಾಯಕರನ್ನು ಮತ್ತಷ್ಟು ಶೋಷಿಸಲು ತುದಿಗಾಲಲ್ಲಿ ನಿಂತಿರುತ್ತಾರೆ.

ಅಷ್ಟಕ್ಕೂ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪದಗಳನ್ನು ತರ್ಜುಮೆ ಮಾಡುವಾಗ, ನಾಮಪದಗಳನ್ನು ಭಾಷಾಂತರ ಮಾಡದೆ ಹಾಗೇ ಉಳಿಸಿಕೊಳ್ಳಲಾಗುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಆವಿಷ್ಕರಿಸಲಾದ ಯುರೇನಸ್, ನೆಪ್ಚೂನ್ ಮತ್ತು ಪ್ಲೂಟೊಗಳು ಆಧುನಿಕ ವಿಜ್ಞಾನದ ಸಂಕೇತಗಳಾಗಿ ನಿಲ್ಲುತ್ತವೆ. ಅಂತೆಯೇ, ಇವುಗಳ ಹೆಸರನ್ನು ಯಥಾವತ್ತಾಗಿ ಬಳಸುವುದು ಯುಕ್ತ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.