ಮೊಬೈಲ್ ಫೋನ್ನ ಕೆಲವು ಗ್ರಾಹಕರು ಕೇವಲ ಫೋನಿಗಾಗಿ ಮಾತ್ರ ಮೊಬೈಲ್ ಬಳಸುತ್ತಾರೆ. ಆದರೆ ಮೊಬೈಲ್ ಫೋನ್ ಸೇವಾ ಕಂಪೆನಿಗಳು ಜಾತಕ, ಜೋಕ್ ಇತ್ಯಾದಿ ಸೇವೆಗಳನ್ನು ನೀಡುವ ನೆಪದಲ್ಲಿ ಬೇಕಾಬಿಟ್ಟಿಯಾಗಿ ಹಣ ಲೂಟಿ ಮಾಡುತ್ತಿವೆ.

ಗ್ರಾಹಕರು ಮನವಿ ಮಾಡದಿದ್ದರೂ ಸಹ `ತಮ್ಮ ಮನವಿಗೆ ಧನ್ಯವಾದಗಳು~ ಎಂದು ಕಂಪೆನಿಗಳು ತಾವೇ ಎಸ್ಎಂಎಸ್ ಕಳುಹಿಸಿ ಮುಂದಿನ 20 ದಿನಗಳಿಗೆ ಮಾತ್ರ ರೂ 20 ಅಥವಾ ರೂ 30ಗಳನ್ನು ಮೊಬೈಲ್ ಕರೆನ್ಸಿಯಲ್ಲಿ ಕಡಿತಗೊಳಿಸಲಾಗಿದೆ ಎಂದು ತಿಳಿಸುತ್ತವೆ.

`ನಮಗೆ ಈ ಯಾವ ಸೇವೆಗಳ ಅಗತ್ಯವಿಲ್ಲ. ಹಾಗಾಗಿ ಸೇವೆಗಳನ್ನು ಸ್ಥಗಿತಗೊಳಿಸಿ ಹಣ ಕಡಿತಗೊಳಿಸುವುದನ್ನು ನಿಲ್ಲಿಸಿ~ ಎಂದು ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಮನವಿ ಮಾಡಿದಾಗ, ಒಂದರೆಡು ದಿನಗಳವರೆಗೆ ಮಾತ್ರ ನಿಲ್ಲಿಸಿ ಮತ್ತೆ ಬೇರೊಂದು ಸೇವೆ ಆರಂಭಿಸಿ ಹಣ ಲೂಟಿ ಮಾಡಲಾಗುತ್ತಿದೆ.

ಗ್ರಾಹಕರ ವಂಚನೆಯ ಆರೋಪದ ಮೇಲೆ ಕಂಪೆನಿಗಳ ವಿರುದ್ದ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವ ವ್ಯವಸ್ಥೆ ಜಾರಿಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.