ಧರ್ಮ ಎಂದರೇನು? ಯಾವುದು ಧರ್ಮ? ಎಂಬುದನ್ನು ತಿಳಿಸಲು ಕೃಷ್ಣದತ್ತ ಭಟ್ಟರು ‘ವೇದ ಧರ್ಮ’ ಎಂಬ ಕಿರು ಪುಸ್ತಕದ ಆರಂಭದಲ್ಲಿ ಹೀಗೆ ಬರೆಯುತ್ತಾರೆ: ‘ಒಂದು ಚಿಕ್ಕಮಗು, ಮೇಲಿನಿಂದ ಒಂದು ಸಲ ಕೆಳಕ್ಕೆ ಜಾರಿ ಬಿತ್ತು. ಗಾಯವಾಯಿತು; ‘ಡಾಕ್ಟರನ್ನು ಕರೆದುಕೊಂಡು ಬಾ’ ಎಂದು ದೊಡ್ಡವನಿಗೆ ಹೇಳಿದರು. ಡಾಕ್ಟರ್ ಆಗ ತಾನೇ ಹೊರಗಿನಿಂದ ಬಂದಿದ್ದ. ದಣಿದು ಇದ್ದ. ‘ನಾನು ಚಹಾ ಕುಡಿದು ಬರುತ್ತೇನೆ, ಸ್ವಲ್ಪ ನಿಲ್ಲು’ ಎಂದ. ತಾಯಿ ಈ ಮಾತು ಹೇಳಿ ಗಳಗಳ ಅತ್ತಳು. ‘ಆ ಡಾಕ್ಟರ್ ಮನುಷ್ಯನೋ ಪಶುವೋ? ತನ್ನ ಮಗಳು ಜಾರಿಬಿದ್ದಿದ್ದರೆ ಚಹಾ ಕುಡಿಯುತ್ತ ಕೂಡುತ್ತಿದ್ದನೇ? ಓಡೋಡಿ ಹೋಗುತ್ತಿರಲಿಲ್ಲವೇ?’ ಎಂದಳು.

ಪಶು ಬೇರೆ ಮನುಷ್ಯ ಬೇರೆ ಎಂದು ಮಾಡುತ್ತದಲ್ಲ - ಅದೇ ಧರ್ಮ. ಊಟ ತಿಂಡಿ, ಕುಡಿತ ಕುಣಿತ, ರಂಗುಭಂಗುಗಳಲ್ಲಿ ಕಾಲ ಕಳೆಯುತ್ತ ಬದುಕುವ ಮನುಷ್ಯನಿಗೂ ಪಶುವಿಗೂ ಏನು ಭೇದ? ಎಲ್ಲರ ಒಳಗೂ ಇರುವುದು ಒಂದೇ ಆತ್ಮ. ಎಲ್ಲರಿಗೂ ನೋವು ಇರುವುದು ಒಂದೇ ರೀತಿ. ಈ ಮಾತನ್ನು ಅರಿತುಕೊಳ್ಳುವುದೇ ಧರ್ಮ. (ನೋಡಿ : ಶ್ರೀ ಕೃಷ್ಣದತ್ತಭಟ್ಟ, ಸರ್ವೋದಯ ಸಾಹಿತ್ಯ ಮಾಲಿಕೆ, ಗಾಂಧಿ ಭವನ, ಬೆಂ.1, 1965)

ಪ್ರಸ್ತುತ, ಮಂಗಳೂರಿನ ಎ.ಜೆ. ಆಸ್ಪತ್ರೆ ವೈದ್ಯರ ತಂಡವು ರೈಲು ಅಪಘಾತದಲ್ಲಿ ಎರಡೂ ಕಾಲುಗಳು ಬೇರ್ಪಟಿದ್ದ ಎರಡು ವರ್ಷದ ಮೊಹಮ್ಮದ್ ಸಾಲೆ ಎಂಬ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಕಾಲುಗಳ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದೆ. ‘ಪ್ರಜಾವಾಣಿ’ ಡಿ.16ರ ಸಂಚಿಕೆಯಲ್ಲಿ ಈ ಕುರಿತ ಸಚಿತ್ರ ಸುದ್ದಿಯನ್ನು ಓದಿದ ನನಗೆ, ಭಟ್ಟರು ಬರೆದ ಮೇಲಿನ ಮಾತುಗಳು ನೆನಪಾದವು. ಇದು ಜೀವ, ಇದು ಜೀವನ ಧರ್ಮ.

ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.