ಛತ್ತೀಸಗಡದ ಬಿಲಾಸಪುರದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಲ್ಲಿ 13 ಮಂದಿ ಸಾವನ್ನಪ್ಪಿ, ಇನ್ನೂ ಕೆಲವರು ಚಿಂತಾಜನಕ ಸ್ಥಿತಿಯಲ್ಲಿರುವುದು ಆಘಾತಕಾರಿ. ಸರ್ಕಾರ ನೀಡಿದ ಗುರಿ ಮುಟ್ಟುವ ಆತುರದಲ್ಲಿ ವೈದ್ಯರಿಂದಾದ ಈ ಅಚಾತುರ್ಯ ಅಕ್ಷಮ್ಯ.

ಹೆಣ್ಣು ಯೌವನಕ್ಕೆ ಕಾಲಿಟ್ಟಾಗಿನಿಂದ ಪ್ರತಿ ತಿಂಗಳು ಮುಟ್ಟಾಗುವುದು, ನಂತರ ಮಕ್ಕಳನ್ನು ಹೊತ್ತು- ಹೆತ್ತು ಹಾಲೂಡಿಸಿ ಸಲಹುವುದು ಪ್ರಕೃತಿ ನಿಯಮ. ಆದರೆ ಈ ಶಸ್ತ್ರಚಿಕಿತ್ಸೆಯನ್ನಾದರೂ ಪುರುಷರು ಮಾಡಿಸಿಕೊಳ್ಳಬಹುದಲ್ಲವೇ? ಪುರುಷರಿಗೆ ಈ ಚಿಕಿತ್ಸೆ ಮಾಡಿಸುವುದು ಅತ್ಯಂತ ಸರಳ ಮತ್ತು ಸುಲಭ ಎಂದು ಹೇಳಲಾಗುತ್ತದೆ. ಆದರೂ ಈ ವಿಷಯದಲ್ಲೂ ಮಹಿಳೆಯೇ ಶೋಷಿತಳು.

ಈಗ ಮೃತರಾದ ಮಹಿಳೆಯರು ಇನ್ನೂ ಚಿಕ್ಕ ವಯಸ್ಸಿನವರು. ಇನ್ನೂ ಪುಟಾಣಿಗಳಾಗಿರುವ ಅವರ ಮಕ್ಕಳನ್ನು ನೋಡಿಕೊಳ್ಳುವವರಾರು? ಇದೇ ನೆಪದಲ್ಲಿ ಅವರ ಗಂಡಂದಿರು ತಿಂಗಳೊಪ್ಪತ್ತಿನಲ್ಲೇ ಮರುಮದುವೆಯಾದರೂ ಆಶ್ಚರ್ಯವಿಲ್ಲ. ಆಗ ಆ ಮಕ್ಕಳೆಲ್ಲ ನಿಜಕ್ಕೂ ಅನಾಥರಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.