ಗುಜರಾತದಲ್ಲಿ ತಾನು ಮುಖ್ಯಮಂತ್ರಿಯಾದಂದಿನಿಂದ ಆಗಿರುವ ಆರ್ಥಿಕ ಉತ್ಕರ್ಷವೆಲ್ಲ ತನ್ನ ಕರ್ತೃತ್ವಶಕ್ತಿಯ ಪರಿಣಾಮ ಎಂದು ಕೊಚ್ಚಿಕೊಳ್ಳುತ್ತಾರೆ ಮೋದಿ. ಹಾಗಾದರೆ ೨೦೦೨ರಲ್ಲಿ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವಾಗ ಅವ್ಯಾಹತವಾಗಿ ನಡೆದ ಹಿಂಸೆಯನ್ನು ಮಾತ್ರ ತನ್ನ ಹೊಣೆಯೆಂದು ಒಪ್ಪಿಕೊಳ್ಳಲು ಇಷ್ಟೇಕೆ ನುಣುಚಿಕೊಳ್ಳುತ್ತಾರೆ? ಮುಖ್ಯಮಂತ್ರಿಯಾಗಿದ್ದಾಗ ತನ್ನ ರಕ್ಷಣೆಯಲ್ಲಿದ್ದ ಸಾವಿರಾರು ಪ್ರಜೆಗಳ ಹತ್ಯಾಕಾಂಡ ಕಣ್ಣೆದುರಿಗೇ ನಡೆದಾಗ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ತಾನು ಕೈಕಟ್ಟಿ ಕೂತಿದ್ದೆ ಎಂಬ ಅವರ ಒಪ್ಪಿಗೆ ನಾಳೆ ಈತ ಪ್ರಧಾನಿಯಾದರೆ ಅದಕ್ಕೂ ಹೆಚ್ಚಿನ ಸಂಭ್ರಮದಿಂದ ನರಮೇಧವನ್ನು ವೀಕ್ಷಿಸುತ್ತ ಕೂತಿರಲಾರರೇ ಎಂಬ ಶಂಕೆ ಹುಟ್ಟಿಸುತ್ತದೆ.

ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ವೈಖರಿ ಯಾವುದೋ ಅಮೆರಿಕನ್ ಪಿ.ಆರ್.ಓ ಕಮ್ಮಟದಲ್ಲಿ ರೂಪುಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ಅಧ್ಯಕ್ಷನೊಬ್ಬನ ಆಯ್ಕೆಯಾಗುತ್ತದೆ ಹೊರತು ಪಕ್ಷದ ಅಸ್ತಿತ್ವವೇ ಗೌಣವಾಗುತ್ತದೆ. ಇಂಥ ವ್ಯಕ್ತಿಕೇಂದ್ರಿತ ಪ್ರಚಾರ ಮೋದಿಯ ಆತ್ಮಲೋಲುಪತೆಗೆ ಒಪ್ಪವಾಗಿ ಹೊಂದುವ ವಿಧಾನವಾದರೂ ಅವರ ಪಕ್ಷ ತೋರಿಸುತ್ತಿರುವ ಮೂಕ ದೈನ್ಯ ಆಶ್ಚರ್ಯಕರ.

ಇಲ್ಲಿಯ ತನಕದ ಪ್ರಚಾರದಲ್ಲಿ ಪಕ್ಷದ ತಾತ್ವಿಕ ಪ್ರಣಾಳಿಕೆಗೆ ಸ್ಥಾನವಿಲ್ಲ. ಅದನ್ನು ರೂಪಿಸಿದ ಅಡ್ವಾಣಿಯಂಥ ನಾಯಕರಿಗೆ ಸ್ಥಾನವಿಲ್ಲ. ಪಕ್ಷ ಕಟ್ಟುವುದರಲ್ಲಿ ವರ್ಷಾನುಗಟ್ಟಲೆ ದುಡಿದ ಸುಷ್ಮಾ ಸ್ವರಾಜರಂಥ ನೇತಾರರಿಗೂ ಸ್ಥಾನವಿಲ್ಲ. ಎಲ್ಲಿ ನೋಡಿದರೂ ಮೋದಿ. ಕಳೆದ 64 ವರ್ಷಗಳಿಂದ ಸ್ಪಷ್ಟ ಸ್ವರೂಪ ತಾಳಿರುವ ನಮ್ಮ ದೈನಂದಿನ ರಾಷ್ಟ್ರೀಯ ಆಡಳಿತದಲ್ಲಿ ಈ ಹೊಸ ವ್ಯಕ್ತಿಪೂಜೆ ಯಾವ ಕುಚೋದ್ಯಕ್ಕೆ ಎಡೆ ಮಾಡಿ ಕೊಟ್ಟೀತೋ ಹೇಳುವಂತಿಲ್ಲ.

ಭಾರತದಲ್ಲಿ ಇಂದಿನ ಪರಿಸ್ಥಿತಿಯಲ್ಲಂತೂ ಏಕಾಧಿಪತ್ಯ ಸಾಧ್ಯವಿಲ್ಲ ನಿಜ. ಮೋದಿ ಪ್ರಧಾನಿಯಾದರೆ 2–3 ವರ್ಷ ಕೂಡ ತನ್ನ ಸ್ಥಾನ ಉಳಿಸಿಕೊಳ್ಳಲಾರರು. ಅವರ ಪತನಕ್ಕೆ ವಿರೋಧಿಗಳಿಗಿಂತ ಪಕ್ಷದ ಅತೃಪ್ತ ಸಹಚರರೇ ಕಾರಣರಾಗುವುದೂ ಸಾಧ್ಯವಿದೆ. ಏಕಾಧಿಪತ್ಯದ ಹಪಾಹಪಿಯುಳ್ಳ ಎಲ್ಲ ರಾಜಕಾರಣಿಗಳ ಹಣೆಬರಹವೇ ಅದು. ಆದರೆ ಆತಂಕದ ವಿಷಯವೆಂದರೆ ಮೋದಿ ರಂಗ ಬಿಟ್ಟು ತೆರಳುವ ಮೊದಲು ನಮ್ಮ ಸಂವಿಧಾನಕ್ಕೆ ಎಂಥ ಹಾನಿ ಬಗೆಯಬಹುದು ಹೇಳುವಂತಿಲ್ಲ. ಆತನ ಅಧಿಕಾರದ ಪಿಪಾಸೆ ನಮ್ಮ ಪ್ರಜಾಸತ್ತಾತ್ಮಕ, ಸೆಕ್ಯುಲರ್ ವ್ಯವಸ್ಥೆಯನ್ನೇ ಹದಗೆಡಿಸುವುದಲ್ಲದೆ ನಮ್ಮ ರಾಷ್ಟ್ರವನ್ನೇ ತುಂಡರಿಸಿ ವಿಚ್ಛಿನ್ನಗೊಳಿಸುವುದೂ ಸಾಧ್ಯವಿದೆ. l

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.