ಆಡಾಡತ ಆಯುಷ್ಯ | ‘ಗೋಕರ್ಣ’ ಎಂಬ ಅಡ್ಡ ಹೆಸರನ್ನು ಬಿಟ್ಟು, ‘ಕಾರ್ನಾಡ’ ಆದ ಪ್ರಸಂಗ
ಆ ಕಾಲದಲ್ಲಿ ಇಪ್ಪತ್ತು ವರ್ಷದ ಹುಡುಗನೊಬ್ಬ ಹಿರಿಯರೆಲ್ಲರನ್ನು ಪ್ರತಿಭಟಿಸುವದು ಸಾಧ್ಯವೇ ಇರಲಿಲ್ಲ. ಅಂಥ ‘ಒರಟುತನ’ ಭಾಲಚಂದ್ರನಲ್ಲೂ ಇರಲಿಲ್ಲ. ಅವನು ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ನೇರ ಸಂಘರ್ಷದಿಂದ ತಲೆ ತಪ್ಪಿಸಿ ಬಾಳಿದ ವ್ಯಕ್ತಿ. (ಆ ದೃಷ್ಟಿಯಿಂದ ಆಯೀಗಿಂತ ಹೆಚ್ಚಾಗಿ ಬಾಪ್ಪಾನನ್ನು ಹೋಲುತ್ತಿದ್ದ.) ಅವನಂಥ ತರುಣನಿಗೆ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸುವ ಆಕಾಂಕ್ಷೆ ಇರಬಹುದು ಎಂಬ ಮಾತೇ ಆ ಯುಗದ ಜನರಿಗೆ ಅರ್ಥವಾಗುತ್ತಿತ್ತೋ ಇಲ್ಲವೋ. ಆಪ್ತರ, ಹಿರಿಯರ, ಸಾಮಾಜಿಕರ ಸೌಕರ್ಯಕ್ಕೆ ಹೊಂದಿಕೊಂಡು ಬಾಳುವದೇ ಆದರ್ಶವಾಗಿತ್ತು.Last Updated 10 ಜೂನ್ 2019, 8:22 IST