ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಅಪ್ಪ-ಮಗ ಇಬ್ಬರು ಬಂದಿದ್ದರು. ಪಂಚೆ ಹಾಕಿ ಬಂದಿದ್ದ ರೈತನಿಗೆ ಮಾಲ್ನಲ್ಲಿ ಪ್ರವೇಶ ನೀಡಲಾಗಿಲ್ಲ. ಯಾಕೆ ಪ್ರವೇಶವಿಲ್ಲ ಎಂದು ಪ್ರಶ್ನಿಸಿದಾಗ ಪಂಚೆ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ ಅಂತೆ.

ಈ ಘಟನೆ ನೋಡಿದ ಮೇಲೆ 2006 ನೆ ಇಸವಿಯಲ್ಲಿ, ನನ್ನ ಓದು ಮುಗಿಸಿ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳಬೇಕು ಎಂದು ಪ್ರತಿಷ್ಠಿತ ಮಾರುತಿ ಸುಜುಕಿ ಕಾರು ವಿತರಕ ಸಂಸ್ಥೆ ಒಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಸಮಯದ ಒಂದು ಘಟನೆ ನೆನಪಾಯಿತು.

ಹೊಸದಾಗಿ ಕೆಲಸಕ್ಕೆ ಸೇರಿ ಕೆಲಸ ಕಲಿಯುತ್ತಿದ್ದ ಸಮಯವದು, ಕಾರು ಮಾರಾಟ ಸಂಸ್ಥೆಯಲ್ಲಿ ನಾನು ಫೀಲ್ಡ್ ಮಾರ್ಕೆಟಿಂಗ್ ಎಗ್ಸಿಕ್ಯುಟಿವ್. ನಾವು ಊರು ಸುತ್ತಿ ಗ್ರಾಹಕರನ್ನು ಸೆಳೆದು ಶೋ ರೂಮ್ ಕಡೆಗೆ ಎಳೆದು ತರಬೇಕಿತ್ತು. ಇನ್ನು ಶೋ ರೂಮ್ ಎಗ್ಸಿಕ್ಯುಟಿವ್ ಶೋ ರೂಮ್ ಅಲ್ಲಿ ಇದ್ರೆ ಆಯ್ತು. ಬಂದ ಗ್ರಾಹಕರನ್ನು ಮಾತಾಡಿಸಿ, ಡೀಲ್ ಡನ್ ಮಾಡುವ ಕೆಲಸ. ಫೀಲ್ಡ್ ಎಗ್ಸಿಕ್ಯುಟಿವ್ ಗಳು ಆಫೀಸ್ ನಲ್ಲಿ ಬೆಳಗ್ಗೆ 10ಕ್ಕೆ ಮೀಟಿಂಗ್ ಮುಗಿಸಿ ಹೊರ ಹೋದವರು ಸಾಯಂಕಾಲ 6 ವರೆಗೆ ಶೋ ರೂಮ್ ಗೆ ಕಾಲು ಇಡುವ ಹಾಗಿರಲಿಲ್ಲ. ಅಗತ್ಯ ಕೆಲಸ, ಅಂದ್ರೆ ಹೊಸ ಕಾರು ಡೆಲಿವರಿ, ನಮ್ಮ ಗ್ರಾಹಕರು ಏನಾದ್ರು ಬಂದ್ರೆ ಮಾತ್ರ ಇರಬೇಕಿತ್ತು ಅಷ್ಟೇ. ಇನ್ನು ಸಾಯಂಕಾಲ 6 ರ ನಂತರ ಬರುವ ಗಿರಾಕಿಗಳು ಕಬ್ಜಾ ಮಾಡುವ ಪ್ರಕ್ರಿಯೆ ನಮ್ಮದೇ.! ಆಮೇಲೆ ನಮ್ಮದೇ ಸಾಮ್ರಾಜ್ಯ!! ಗ್ರಾಹಕರು ಗೇಟ್ ಹತ್ರ ಬರುವ ಮುಂಚೆಯೇ ಹೋಗಿ ದಾಳಿ ಮಾಡಲು, ಸೈನಿಕರಂತೆ ಎಚ್ಚರಿಕೆಯಿಂದ ಹೊಂಚು ಹಾಕಿಕೊಂಡು ನಾವೊಂದು 10 ರಿಂದ 15 ಜನ ಕಾಯುತಿದ್ದೆವು.

ಒಂದು ದಿನ ಒಂದು ಸಾಧಾರಣ ಲುಂಗಿ ಹಾಗೂ ಬಿಳಿ ಅಂಗಿ ಧರಿಸಿದ್ದ ಸುಮಾರು 45 ರಿಂದ 50 ವಯಸ್ಸಿನ ವ್ಯಕ್ತಿ ಒಬ್ಬರು ಶೋ ರೂಮ್ ಕಡೆಗೆ ನಿಧಾನಕ್ಕೆ ಆಚೆ ಈಚೆ ನೋಡುತ್ತಾ ಬರ್ತಾ ಇದ್ದದ್ದನ್ನು ನಾನು ಗಮನಿಸಿದೆ. ನನ್ನ ಜತೆಯಲ್ಲಿ ಇದ್ದ ಸಹುದ್ಯೋಗಿ ಮಿತ್ರರು ಆ ವ್ಯಕ್ತಿಯನ್ನು ನೋಡಿ ಸುಮ್ಮನಾಗಿದ್ದರು. ನಾನು ಹಳ್ಳಿಯ ಜೀವನದಲ್ಲಿ ಬೆಳೆದಿದ್ದರಿಂದಲೋ ಏನೋ ನನಗೆ ಆ ವ್ಯಕ್ತಿಯಲ್ಲಿ ಏನೂ ವ್ಯತ್ಯಾಸ ಅನ್ನಿಸಲಿಲ್ಲ. ಹೊಸ ಕೆಲಸದ ಹುರುಪಿನಲ್ಲಿ ಇದ್ದ ಕಾರಣ ಸೀದಾ ಹೋಗಿ ಅವರನ್ನು ಮಾತಾಡಿಸಿ, ಶೋ ರೂಮ್ ಒಳಗೆ ಕರೆದು ಕುಳ್ಳಿರಿಸಿ, ಉಪಚರಿಸಿದೆ.

ಶೋ ರೂಮ್ ಗೆ ಬಂದ ವಿಷಯ ಏನೆಂದು ಪ್ರಸ್ತಾಪಿಸಿದೆ. ಆ ವ್ಯಕ್ತಿ ನಾನು ಮಾರುತಿ ಕಾರ್ ನೋಡುತ್ತಿದ್ದೇನೆ ಅಂದ್ರು.. ಓಕೆ ಸರ್.. ಮಾರುತಿಯಲ್ಲಿ ಯಾವ ಕಾರು ನೋಡುತ್ತಾ ಇದ್ದೀರಿ ಎಂದು ಮರು ಪ್ರಶ್ನೆ ಮಾಡಿದೆ. ಅವರು ಹಳ್ಳಿ ಭಾಷೆಯಲ್ಲಿ ಆಮ್ನಿ ಆಮ್ನಿ ಅಂದ್ರು... ಓಹೋ ಆಮ್ನಿ ಅಂದ್ರೆ ಓಮ್ನಿನೇ ಇರ್ಬೇಕು ಅಂತ ಅಂದು ಕೊಂಡು ಅವರಿಗೆ ಶೋ ರೂಮ್ ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಕಾರ್ ತೋರಿಸಿದೆ. ಕೂಲಂಕಷವಾಗಿ ನೋಡಿದ ಆ ವ್ಯಕ್ತಿ ಕಾರಿನ ದರದ ಬಗ್ಗೆ ವಿಚಾರಿಸಿದ್ರು. ಎಲ್ಲಾ ವಿವರವಾಗಿ ವಿವರಿಸಿ, ಒಂದು ಬುಕಿಂಗ್ ಮಾಡ್ಕೊಳ್ಳಿ ಸರ್... ಆದಷ್ಟು ಬೇಗ ಕಾರ್ ತರಿಸಿ ಕೊಡ್ತೇನೆ ಅಂತ ಹೇಳಿದೆ. ಬುಕಿಂಗ್ ಗಿಕ್ಕಿಂಗ್ ಎಲ್ಲಾ ಬೇಡ ಅಂದ್ರು..... !!!

ಛೇ...!!!! ಇಷ್ಟು ಹೊತ್ತು ಸುಮ್ಮನೆ ನನ್ನ ಟೈಮ್ ಡಂ ಆಯ್ತಲ್ಲ... ನಾನೇ ಬಕ್ರ ಅದ್ನಲ್ಲ... ನನ್ನ ಸಹುದ್ಯೋಗಿ ಮಿತ್ರರು ಬಹಳ ಚಾಣಾಕ್ಷತನದಿಂದ ಮೊದಲೇ ಅಂದಾಜಿಸಿ ಬಚ್ಚಾವ್ ಆದ್ರಲ್ಲ .... ಅಂತ ಯೋಚನೆ ಬರೋ ಅಷ್ಟರಲ್ಲಿ.. ಆ ವ್ಯಕ್ತಿ... ಸಾರ್ ಎಲ್ಲಾ ದುಡ್ಡು ಈಗಲೇ ಪಾವತಿ ಮಾಡುತ್ತೇನೆ, ನಾಡಿದ್ದು ಹಬ್ಬಕ್ಕೆ ಕಾರ್ ಕೊಡಿ ಅನ್ನೋದಾ...!!! ಲೋನ್ ಏನಾದ್ರು ಹೋಗ್ತಿರ ಸರ್ ಅಂದ್ರೆ ಅದೇನೂ ಬೇಡ ರೀ.. ಸುಮ್ನೆ ಅವ್ರಿಗ್ಯಾಕೆ ಬಡ್ಡಿ ಕೊಟ್ಟೋದು ಅಂದ್ರು.

ಸ್ವಲ್ಪ ಸಾವರಿಸಿಕೊಂಡು, ಹಾ... ಓಕೆ ಸರ್.. ಸ್ಟಾಕ್ ಅಲ್ಲಿ ಕಾರ್ ಇದ್ಯಾ ಅಂತ ಚೆಕ್ ಮಾಡಿ ಹೇಳ್ತಿನಿ ಅಂದೆ.. ಸೀದಾ ಬಂದು ಮೊದಲು ನೀರು ಕುಡಿದು ಸಾವರಿಸಿಕೊಂಡು... ಕಾರ್ ಲಭ್ಯತೆ ಬಗ್ಗೆ ಪರಿಶೀಲಿಸಿ, ದೃಢೀಕರಿಸಿ ಪುನಃ ಅವರಿರುವಲ್ಲಿಗೆ ಹೋಗಿ .. ಕಾರ್ ಇದೆ ಸರ್ ಕೊಡೋಣ ಅಂದೆ. ಮಾರಾಟ ಪ್ರಕ್ರಿಯೆಯ ವಿಧಾನಗಳನ್ನು ಪೂರೈಸಿ, ಪೇ ಮೆಂಟ್ ಮಾಡೋಣ ಬನ್ನಿ ಸರ್ ಅಂದು ಅಕೌಂಟ್ ಸೆಕ್ಷನ್ ಗೆ ಕರೆದುಕೊಂಡು ಹೋದೆ. ಆ ವ್ಯಕ್ತಿ ಅಲ್ಲಿ ಬಂದು ಪಂಚೆ ಒಳಗೆ ಇದ್ದ ದುಡ್ಡಿನ ಕಟ್ಟು ತೆಗೆದು ಟೇಬಲ್ ಮೇಲೆ ಇಟ್ರು. ಇದನ್ನೆಲ್ಲಾ ನೋಡುತ್ತಿದ್ದ ನನ್ನ ಸಹೋದ್ಯೋಗಿ ಮಿತ್ರರು ಗರಬಡಿದಂತೆ ನಿಂತಿದ್ದರು. ನಾನು ಅಲ್ಲಿ ಕೆಲಸಕ್ಕೆ ಸೇರುವ ಮುಂಚೆಯಿಂದಲೂ ಇದ್ದ ಅವರಲ್ಲಿ ಕೆಲವರು, ನನ್ನ ಕೆಲಸದ ಪ್ರತಿಯೊಂದು ವಿಷಯಕ್ಕೂ ಹಾಗೇ ಮಾಡ್ಬೇಡ.. ಹೀಗೆ ಮಾಡ್ಬೇಡ ಅಂತ ಉಚಿತ ಸಲಹೆ ಕೊಡ್ತಾ ಇದ್ರು. ಈ 'ಪಂಚೆ ಉಟ್ಟ ವ್ಯಕ್ತಿ ಕೊಟ್ಟ ಪಂಚ್' ಗೆ ಅವರ ಉಚಿತ ಸಲಹೆ ಬಂದ್ ಆಯ್ತು.

ಈ ಘಟನೆ ಶೋ ರೂಮ್ ಪೂರ್ತಿ ಸುದ್ದಿ ಆಯ್ತು. ಮರುದಿನ ಮೀಟಿಂಗ್ ಅಲ್ಲಿ ನಮ್ಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಅವ್ರಿಗೆ ಮಾತಾಡ್ಲಿಕೆ ವಿಷಯ ಸಿಕ್ಕಿತು. ಶಹಬ್ಬಾಸ್ ಗಿರಿಯ ಪ್ರಾಪ್ತಿಯೊಂದಿಗೆ ಅಂದಿನ ಮೀಟಿಂಗ್ ಸಮಾಪ್ತಿ ಆಯ್ತು.

ಫುಲ್ ಪೇಮೆಂಟ್ ಮಾಡಿ. ಒಂದೇ ವಾರದಲ್ಲಿ ಕಾರ್ ಡೆಲಿವರಿ ಪಡೆದು.. ಶೋ ರೂಮ್ ಪೂರ್ತಿ ಸಿಹಿ ಹಂಚಿ ಹೋದ್ರು... ನಂತರ ದಿನಗಳಲ್ಲಿ ಒಂದಷ್ಟು ಹೊಸ ಹೊಸ ಗ್ರಾಹಕರನ್ನು ನನಗೆ ಪರಿಚಯಿಸಿ ಕೊಡ್ತಾನೆ ಇದ್ರು. ಇಂದಿಗೂ ಅವರು ನನ್ನ ಸಂಪರ್ಕದಲ್ಲಿ ಇದ್ದಾರೆ. ಅವರು ಬೆಂಗಳೂರು ತಮಿಳುನಾಡು ಗಡಿಪ್ರದೇಶದ ಹತ್ತಿರವಿರುವ ಆನೇಕಲ್ ತಾಲೂಕಿನ ರೈತರು.

ಈ ಘಟನೆಯಿಂದ ಹುಟ್ಟಿಕೊಂಡ ಹೊಸ ಗಾದೆ : "ಬಟ್ಟೆ ನೋಡಿ ಅಳೆದರೆ ನೀ ಕೆಟ್ಟೆ"

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.