‘ಥಗ್ಸ್’ ಅಂದರೆ ಯಾರು?
ಅವರು ಜನರಿಗೆ ಆಮಿಷವೊಡ್ಡಿ, ಅವರನ್ನು ಕೊಲೆ ಮಾಡುತ್ತಿದ್ದ ವಿಚಿತ್ರ ಪಂಥವೊಂದರ ಸದಸ್ಯರು. ಕೊಲೆ ಮಾಡಲು ಕಾಳಿ ದೇವಿಯ ಅನುಮತಿ ಇದೆ ಎಂದು ಅವರು ಭಾವಿಸಿಕೊಂಡಿದ್ದರು. ಅವರು ತಾವು ಕೊಲೆ ಮಾಡಿದವರ ಬಳಿ ಇದ್ದಿದ್ದನ್ನು ದೋಚುತ್ತಿದ್ದರು.

ಅವರು ಸಕ್ರಿಯರಾಗಿ ಇದ್ದಿದ್ದು ಎಲ್ಲಿ?
ಅವರು 19ನೆಯ ಶತಮಾನದ ಮೊದಲಾರ್ಧದವರೆಗೆ ದೇಶದಾದ್ಯಂತ ಸಕ್ರಿಯರಾಗಿದ್ದರು.

ಅವರ ಕೈಗೆ ಸಿಗುತ್ತಿದ್ದವರು ಯಾರು?
ಜನ ಸಂಚಾರ ಹೆಚ್ಚು ಇರದ ರಸ್ತೆ ಮೂಲಕ ಪ್ರಯಾಣಿಸುವ ತೀರ್ಥಯಾತ್ರಿಗಳೇ ಸಾಮಾನ್ಯವಾಗಿ ಥಗ್ಸ್ ಕೈಗೆ ಸಿಗುತ್ತಿದ್ದರು.

ಅವರು ಜನರನ್ನು ಹೇಗೆ ಕೊಲ್ಲುತ್ತಿದ್ದರು?
ಥಗ್ಸ್ ಪೈಕಿ ಕೆಲವರು ಯಾತ್ರಿಕರ ಜೊತೆ ಸ್ನೇಹ ಸಂಪಾದಿಸುತ್ತಿದ್ದರು. ಅವರ ಜೊತೆಯಲ್ಲೇ ಏನಾದರೂ ತಿಂದುಂಡು, ಖುಷಿಯಲ್ಲಿ ಇರುತ್ತಿದ್ದರು. ಸಂಜೆಯ ವೇಳೆ ವಾಪಸ್ ಹೋಗಿರುತ್ತಿದ್ದರು. ಮಧ್ಯರಾತ್ರಿಯ ವೇಳೆಗೆ ಈ ತಂಡದ ನಾಯಕ ಕಾಳಿಯ ಆಶೀರ್ವಾದ ಪಡೆದ ನಂತರ ನಿದ್ರಿಸುತ್ತಿದ್ದ ಪ್ರಯಾಣಿಕರ ಮೇಲೆ ದಾಳಿ ನಡೆಸುತ್ತಿದ್ದರು. ತಮ್ಮ ಹಳದಿ ಬಣ್ಣದ ರೇಷ್ಮೆ ಕರವಸ್ತ್ರದಿಂದ ಅವರ ಕುತ್ತಿಗೆ ಹಿಸುಕಿ ಕೊಲ್ಲುತ್ತಿದ್ದರು. ಕೊಂದ ನಂತರ ಅವರನ್ನು ಹೂತುಬಿಡುತ್ತಿದ್ದರು.

ಇವರ ಕಾಟ ಕೊನೆಗೊಂಡಿದ್ದು ಹೇಗೆ?
ಭಾರತದ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಇವರ ಉಪಟಳಕ್ಕೆ ಅಂತ್ಯಹಾಡುವ ತೀರ್ಮಾನ ಕೈಗೊಂಡ. ಇವರನ್ನು ಬಗ್ಗುಬಡಿಯಲು ಜನರಲ್ ಸ್ಲೀಮನ್ ಮತ್ತು ಇತರ ಅಧಿಕಾರಿಗಳನ್ನು ನೇಮಿಸಿದ. ಇವರ ಜೊತೆ ಭಾರತದ ಅರಸರೂ ಸಹಕರಿಸಿದರು. 1831ರಿಂದ 1837ರ ನಡುವಿನ ಅವಧಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಥಗ್ಸ್‌ಗಳನ್ನು ಸೆರೆಹಿಡಿಯಲಾಯಿತು. ಈ ಮೂಲಕ ಅವರ ಅಟ್ಟಹಾಸ ಅಂತ್ಯಗೊಂಡಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.