ಕಾಮನ ಬಿಲ್ಲಿನ ಬಣ್ಣಗಳೇಳು
ಎಂತಹುವೆಂದು ಹೇಳುವೆ ಕೇಳು
ಮೊದಲನೆ ಬಣ್ಣ ನೇರಳೆ ಬಣ್ಣ
ನೇರಳೆ ಹಣ್ಣು ಬಲು ಸಿಹಿಯಣ್ಣ!
ಎರಡನೆ ಬಣ್ಣ ಊದಾ ಅಣ್ಣ
ಊದಾ ಬಣ್ಣದ ಹಕ್ಕಿಯು ಚೆನ್ನ!
ಮೂರನೆ ಬಣ್ಣ ನೀಲಿಯ ಬಣ್ಣ
ಆಕಾಶದಲಿ ಹರಡಿಹುದಣ್ಣ!
ನಾಲ್ಕನೆ ಬಣ್ಣ ಹಚ್ಚನೆ ಹಸುರು
ಹಸುರಿನ ಕಾಡು ನಮ್ಮುಸಿರು
ಹೊಳಪಿನ ಹಳದಿ ಐದನೆ ಬಣ್ಣ
ಅರಿಷಿಣ ಬಣ್ಣ ತುಂಬಿದೆ ಕಣ್ಣ!
ಆರನೆ ಬಣ್ಣ ಕಿತ್ತಲೆ ತಿಳಿಯೋ
ಕಿತ್ತಲೆ ತೊಳೆಯು ಬಲು ರುಚಿಯೋ!
ಏಳನೆ ಬಣ್ಣ ಕೆಂಪೋ ಕೆಂಪು
ಹುಟ್ಟುವ ಸೂರ್ಯ ಕೆಂಪಿನ ಸೊಂಪು!
ಏಳನು ಸೇರಿಸಿ `ರೋಹಿತ' ಎನುವರು
ಏಳೂ ಬಣ್ಣಕೆ ಮೋಹಿತರೆಲ್ಲರು
ಕಾಮನಬಿಲ್ಲನು ಕೀಳೋಣ
ಬಣ್ಣದ ಅಂಗಿಯ ಹೊಲಿಸೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಕಾಮನ ಬಿಲ್ಲಿನ ಬಣ್ಣಗಳೇಳು
ಎಂತಹುವೆಂದು ಹೇಳುವೆ ಕೇಳು
ಮೊದಲನೆ ಬಣ್ಣ ನೇರಳೆ ಬಣ್ಣ
ನೇರಳೆ ಹಣ್ಣು ಬಲು ಸಿಹಿಯಣ್ಣ!
ಎರಡನೆ ಬಣ್ಣ ಊದಾ ಅಣ್ಣ
ಊದಾ ಬಣ್ಣದ ಹಕ್ಕಿಯು ಚೆನ್ನ!
ಮೂರನೆ ಬಣ್ಣ ನೀಲಿಯ ಬಣ್ಣ
ಆಕಾಶದಲಿ ಹರಡಿಹುದಣ್ಣ!
ನಾಲ್ಕನೆ ಬಣ್ಣ ಹಚ್ಚನೆ ಹಸುರು
ಹಸುರಿನ ಕಾಡು ನಮ್ಮುಸಿರು
ಹೊಳಪಿನ ಹಳದಿ ಐದನೆ ಬಣ್ಣ
ಅರಿಷಿಣ ಬಣ್ಣ ತುಂಬಿದೆ ಕಣ್ಣ!
ಆರನೆ ಬಣ್ಣ ಕಿತ್ತಲೆ ತಿಳಿಯೋ
ಕಿತ್ತಲೆ ತೊಳೆಯು ಬಲು ರುಚಿಯೋ!
ಏಳನೆ ಬಣ್ಣ ಕೆಂಪೋ ಕೆಂಪು
ಹುಟ್ಟುವ ಸೂರ್ಯ ಕೆಂಪಿನ ಸೊಂಪು!
ಏಳನು ಸೇರಿಸಿ `ರೋಹಿತ' ಎನುವರು
ಏಳೂ ಬಣ್ಣಕೆ ಮೋಹಿತರೆಲ್ಲರು
ಕಾಮನಬಿಲ್ಲನು ಕೀಳೋಣ
ಬಣ್ಣದ ಅಂಗಿಯ ಹೊಲಿಸೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.