ಮುಂಬೈ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಫೆಬ್ರುವರಿ 23ರಿಂದ ಆರಂಭವಾಗಲಿದೆ. ಕರ್ನಾಟಕ ಬುಲ್ಡೋಜರ್ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸಲಿದ್ದಾರೆ.

ಭಾರತದ ಜನಪ್ರಿಯ ಒಟಿಟಿ ವೇದಿಕೆಯಗಿರುವ ಜಿಯೊಸಿನಿಮಾ, ಸಿಸಿಎಲ್ ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ನಾಲ್ಕು ವಾರಾಂತ್ಯಗಳಲ್ಲಿ ನಡೆಯಲಿರುವ ಸಿಸಿಎಲ್ 10ನೇ ಸೀಸನ್ನಲ್ಲಿ ಒಟ್ಟೂ 20 ರೋಚಕ ಪಂದ್ಯಗಳು ನಡೆಯಲಿವೆ. ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಸಿನಿಮಾಪ್ರೇಮಿಗಳೂ ಕುತೂಹಲದಿಂದ ವೀಕ್ಷಿಸುವ ಈ ಕ್ರಿಕೆಟ್ ಲೀಗ್ ಅನ್ನು ವ್ಯಾಪಕವಾದ ಪ್ರೇಕ್ಷವರ್ಗಕ್ಕೆ ನೇರವಾಗಿ ತಲುಪಿಸಲು ಜಿಯೊಸಿನಿಮಾ ಮುಂದಾಗಿದೆ. ಇದೇ ಫೆಬ್ರುವರಿ 23ರಿಂದ ಎಕ್ಸ್ಕ್ಲೂಸಿವ್ ಆಗಿ ಜಿಯೊಸಿನಿಮಾದಲ್ಲಿ ಸಿಸಿಎಲ್ ಪಂದ್ಯಗಳು ನೇರಪ್ರಸಾರವಾಗಲಿವೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ರಾರಂಭವಾಗಿದ್ದು 2011ರಲ್ಲಿ. ನಂತರದ ದಿನಗಳಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿರುವ ಸಿಸಿಎಲ್, ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಕರನ್ನು ಹೊಂದಿರುವ ಕ್ರೀಡಾ-ಮನರಂಜನೆಯ ಇವೆಂಟ್ ಆಗಿ ಹೊರಹೊಮ್ಮಿದೆ. ಟೀವಿ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಪ್ರಸಾರವಾಗಿದ್ದಕಳೆದ ವರ್ಷದ ಸಿಸಿಎಲ್ ಅನ್ನು, ದೇಶದಾದ್ಯಂತ 250 ಮಿಲಿಯನ್ಗೂ ಅಧಿಕ ಜನರು ವೀಕ್ಷಿಸಿದ್ದರು.

ಯಾವ ತಂಡಗಳು?:

ಭಾರತದ ಎಂಟು ಮುಖ್ಯ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳು ಈ ಬಾರಿಯ ಸಿಸಿಎಲ್ನಲ್ಲಿ ಭಾಗವಹಿಸುತ್ತಿವೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್ ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸುತ್ತಿವೆ. ಸಿಸಿಎಲ್ ಸೀಸನ್ 10ನಲ್ಲಿ ಬೇರೆ ಬೇರೆ ಚಿತ್ರರಂಗಗಳ ಇನ್ನೂರಕ್ಕೂ ಅಧಿಕ ಜನಪ್ರಿಯ ತಾರೆಗಳು, ಗಣ್ಯರು ಜೊತೆಯಾಗಿ, ಪ್ರೇಕ್ಷಕರಿಗೆ ಊಹಿಸಲಸಾಧ್ಯ ಮನರಂಜನೆಯ ರಸದೂಟವನ್ನು ಉಣಿಸಲಿದ್ದಾರೆ.

ಯಾವ ತಂಡಕ್ಕೆ ಯಾರು ನಾಯಕರು?:

ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ರಿತೇಶ್ ದೇಶಮುಖ್ ಈ ತಂಡದ ನಾಯಕ. ಸೋಹೈಲ್ ಖಾನ್, ಮುಂಬೈ ಹೀರೊಸ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ‘ತೆಲುಗು ವಾರಿಯರ್ಸ್’ ತಂಡದ ನಾಯಕ. ‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ಕಿಚ್ಚ ಸುದೀಪ್ ನಾಯಕನಾಗಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 10 ಅನ್ನು ಈಗಷ್ಟೇ ಮುಗಿಸಿರುವ ಸುದೀಪ್, ಮತ್ತೊಮ್ಮೆ ಸಿಸಿಎಲ್ 10 ಮೂಲಕ ಜಿಯೊಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ಲಾಲ್ ಸಹಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ನಾಯಕರಾಗಿದ್ದಾರೆ. ‘ಪಂಜಾಬ್ ದೆ ಶೇರ್’ ತಂಡಕ್ಕೆ ಸೋನು ಸೂದ್ ನಾಯಕರಾಗಿದ್ದಾರೆ. ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್’ ತಂಡಕ್ಕೆ ಜಿಸ್ಸು ಸೆನ್ಗುಪ್ತ ನಾಯಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.