ಬೆಂಗಳೂರು: ವಿಕೆಟ್ಕೀಪರ್ ಅನ್ವಯ್ ದ್ರಾವಿಡ್ ಅವರನ್ನು ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕದ ಸಂಭವನೀಯರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅನ್ವಯ್ ಅವರು ಭಾರತ ತಂಡದ ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಮಗ.

ಬಿಸಿಸಿಐ ಆಯ್ಕೆ ಸಮಿತಿಯು ಶನಿವಾರ ಪ್ರಕಟಿಸಿರುವ ಸಂಭವನೀಯರ 35 ಆಟಗಾರರ ಪಟ್ಟಿಯಲ್ಲಿ ಅನ್ವಯ್ ಸೇರಿದಂತೆ ಮೂವರು ವಿಕೆಟ್ಕೀಪರ್ಗಳಿದ್ದಾರೆ. ಆದಿತ್ಯ ಝಾ ಮತ್ತು ಜಾಯ್ ಜೇಮ್ಸ್ ಅವರೇ ಆ ವಿಕೆಟ್ಕೀಪರ್ಗಳು.

ಅನ್ವಯ್ ಅವರು 14 ವರ್ಷದೊಳಗಿನವರ ರಾಜ್ಯ ತಂಡದ ನಾಯಕತ್ವ ವಹಿಸಿದ್ದಾರೆ. ಹೋದ ವರ್ಷ ಅಂತರ ವಲಯ ಟೂರ್ನಿಯಲ್ಲಿ ಬೆಂಗಳೂರು ವಲಯ ಪ್ರತಿನಿಧಿಸಿದ್ದ ಅನ್ವಯ್ ಅಜೇಯ ದ್ವಿಶತಕ ಗಳಿಸಿದ್ದರು.

ಅನ್ವಯ್ ಅವರ ಅಣ್ಣ ಸಮಿತ್ ದ್ರಾವಿಡ್ ಅವರು ಕೂಚ್ ಬಿಹಾರ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ವಿಜಯ್ ಮರ್ಚ್ ಟ್ರೋಫಿಯಲ್ಲಿ ಆಡಲಿರುವ ರಾಜ್ಯ ತಂಡಕ್ಕೆ ಮಾಜಿ ಆಟಗಾರರಾದ ಕುನಾಲ್ ಕಪೂರ್ ಮತ್ತು ಆದಿತ್ಯ ಬಿ ಸಾಗರ್ ಅವರು ಕ್ರಮವಾಗಿ ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.