ನವದೆಹಲಿ: ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಈ ಸಲದ ಕೌಂಟಿ ಕ್ರಿಕೆಟ್ನಲ್ಲಿ ನಾಟಿಂಗ್ಹ್ಯಾಮ್ಶೈರ್ ಪರ ಆಡಲಿದ್ದಾರೆ.

‘ಅಶ್ವಿನ್ ಅವರು ನಾಟಿಂಗ್ಹ್ಯಾಮ್ಶೈರ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಈ ಋತುವಿನ ಕೌಂಟಿಯಲ್ಲಿ ಆರು ಪಂದ್ಯಗಳನ್ನು ಆಡಲಿದ್ದಾರೆ. ಬಿಸಿಸಿಐ ಆಡಳಿತ ನೋಡಿಕೊಳ್ಳಲು ಸುಪ್ರಿಂಕೋರ್ಟ್ನಿಂದ ನೇಮಕವಾಗಿರುವ ಆಡಳಿತಾಧಿಕಾರಿಗಳ ಸಮಿತಿಯು (ಸಿಒಎ) ನಿರಾಪೇಕ್ಷಣ ಪತ್ರ ನೀಡುವುದು ಬಾಕಿ ಇದೆ. ಪತ್ರ ಸಿಕ್ಕ ಕೂಡಾಲೇ ಅವರು ಇಂಗ್ಲೆಂಡ್ಗೆ ಪ್ರಯಾಣಿಸಲಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

32 ವರ್ಷ ವಯಸ್ಸಿನ ಅಶ್ವಿನ್ 2017ರಲ್ಲೂ ಕೌಂಟಿಯಲ್ಲಿ ಆಡಿದ್ದರು. ಆಗ ವಾರ್ಷೆಸ್ಟರ್ಶೈರ್ ತಂಡವನ್ನು ಪ್ರತಿನಿಧಿಸಿದ್ದ ಅವರು ನಾಲ್ಕು ಪಂದ್ಯಗಳಿಂದ 20 ವಿಕೆಟ್ ಉರುಳಿಸಿದ್ದರು. 214ರನ್ಗಳನ್ನೂ ಗಳಿಸಿದ್ದರು.

ಅಜಿಂಕ್ಯ ರಹಾನೆ (ಹ್ಯಾಂಪ್ಶೈರ್) ಮತ್ತು ಚೇತೇಶ್ವರ ಪೂಜಾರ (ಯಾರ್ಕ್ಶೈರ್) ಅವರೂ ಈ ಸಲದ ಕೌಂಟಿ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಅವರೂ ಆಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.