ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಹಾಂಗ್ಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಕ್ಸರ್ಗಳ ಸುರಿಮಳೆಗೈದಿರುವ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಶಿರಬಾಗಿ ನಮಿಸಿದ್ದಾರೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 40 ರನ್ ಅಂತರದ ಗೆಲುವು ದಾಖಲಿಸಿತ್ತು. ಇದರೊಂದಿಗೆ 'ಸೂಪರ್ ಫೋರ್' ಹಂತಕ್ಕೆ ಪ್ರವೇಶಿಸಿದೆ.

ಇದನ್ನೂ ಓದಿ:IND vs HK | ಕೊಹ್ಲಿ, ಸೂರ್ಯಕುಮಾರ್ ಅಬ್ಬರ: 'ಸೂಪರ್ 4' ಹಂತಕ್ಕೆ ಭಾರತ ಲಗ್ಗೆ

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು, ಸೂರ್ಯಕುಮಾರ್ ಹಾಗೂ ಕೊಹ್ಲಿ ಬಿರುಸಿನ ಅರ್ಧಶತಕಗಳ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಹಾಂಗ್ಕಾಂಗ್ ಐದು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಕೊಹ್ಲಿ ಹಾಗೂ ಸೂರ್ಯಕುಮಾರ್ ಮುರಿಯದ ಮೂರನೇ ವಿಕೆಟ್ಗೆ 42 ಎಸೆತಗಳಲ್ಲಿ 98 ರನ್ಗಳ ಜೊತೆಯಾಟ ಕಟ್ಟಿದರು.

ವಿರಾಟ್ ಕಲಾತ್ಮಕ ಇನ್ನಿಂಗ್ಸ್ ಕಟ್ಟಿದರೆ ಸೂರ್ಯುಕುಮಾರ್ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು. ಕೇವಲ 26 ಎಸೆತಗಳಲ್ಲಿಸೂರ್ಯ, 68 ರನ್ ಗಳಿಸಿ ಔಟಾಗದೆ ಉಳಿದರು. ಅವರ ಸಿಡಿಲಬ್ಬರದ ಇನ್ನಿಂಗ್ಸ್ನಲ್ಲಿ ತಲಾ ಆರು ಸಿಕ್ಸರ್ ಹಾಗೂ ಬೌಂಡರಿಗಳು ಸೇರಿದ್ದವು.

ಇನ್ನಿಂಗ್ಸ್ನ ಅಂತಿಮ ಓವರ್ನಲ್ಲಿ ಸೂರ್ಯಕುಮಾರ್, ನಾಲ್ಕು ಸಿಕ್ಸರ್ ಸೇರಿದಂತೆ 26 ರನ್ ಸಿಡಿಸಿದ್ದರು. ಅಲ್ಲದೆ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ಭಾರತದ ಇನ್ನಿಂಗ್ಸ್ ಬಳಿಕ ಪೆವಿಲಿಯನ್ಗೆ ಹಿಂತಿರುಗುತ್ತಿದ್ದ ವೇಳೆ ಸೂರ್ಯಕುಮಾರ್ ಅಮೋಘ ಬ್ಯಾಟಿಂಗ್ಗೆ ಮನಸೋತ ಕೊಹ್ಲಿ, ಶಿರಬಾಗಿ ನಮಿಸಿದರು. ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟಾಗ ದಿನೇಶ್ ಕಾರ್ತಿಕ್ ಇದಕ್ಕೆ ಸಮಾನವಾಗಿ ಶಿರಬಾಗಿ ನಮಿಸಿದ್ದರು.

Koo App
What an epic innings it was... #SKY has proved again, why he’s called Mr.360° ! And very glad to see @virat.kohli back in form. Absolute power packed innings by these two. #SuryakumarYadav #INDvHKG #CricketOnKoo
View attached media content
- Avinash (@Im.avinash) 1 Sep 2022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.