ಪಲೇಕೆಲೆ (ಶ್ರೀಲಂಕಾ): ಪಾಕಿಸ್ತಾನದಂತಹ ಉತ್ತಮ ಗುಣಮಟ್ಟದ ಬೌಲಿಂಗ್ ದಾಳಿಯನ್ನು ಎದುರಿಸಲು ಅತ್ಯುತ್ತಮ ಪ್ರದರ್ಶನವನ್ನೇ ನೀಡಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದ ಬಲ ಆ ತಂಡದ ಬೌಲಿಂಗ್ ಪಡೆಯಾಗಿದೆ. ಯಾವುದೇ ಹಂತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಬಲ್ಲ ಪ್ರಭಾವಶಾಲಿ ಬೌಲರ್ಗಳನ್ನು ಹೊಂದಿದೆ. ಹಾಗಾಗಿ ಪಾಕ್ ತಂಡದ ಬೌಲರ್ಗಳನ್ನು ಎದುರಿಸಲು ಸಂಪೂರ್ಣ ಸಮರ್ಥರಾಗಿರಬೇಕು ಎಂದು ವಿರಾಟ್ ಎಚ್ಚರಿಸಿದ್ದಾರೆ.

'ಸ್ಟಾರ್ ಸ್ಪೋರ್ಟ್ಸ್'ಗೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ ಈ ಕುರಿತು ಮಾತನಾಡಿದ್ದಾರೆ.

ತಮ್ಮ ಬ್ಯಾಟಿಂಗ್ ಕುರಿತು ಮಾತನಾಡಿದ ಕೊಹ್ಲಿ, ನಾನು ನನ್ನ ಆಟವನ್ನು ಹೇಗೆ ಮತ್ತಷ್ಟು ಉತ್ತಮಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇದರಿಂದಾಗಿ ಪ್ರತಿದಿನ, ಪ್ರತಿ ಅಭ್ಯಾಸದ ಅವಧಿ, ಪ್ರತಿ ವರ್ಷ, ಪ್ರತಿ ಋತುವಿನಲ್ಲಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ನೆರವಾಗಿದೆ ಎಂದು ಹೇಳಿದ್ದಾರೆ.

ಈ ಮನಸ್ಥಿತಿಯಿಲ್ಲದೆ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಫರ್ಫಾಮೆನ್ಸ್ ಮಾತ್ರ ಗುರಿಯಾಗಿದ್ದರೆ ಒಂದು ಹಂತದಲ್ಲಿ ನೀವು ತೃಪ್ತರಾಗಿ ಕಠಿಣ ಪರಿಶ್ರಮ ವಹಿಸುವುದನ್ನು ನಿಲ್ಲಿಸುವ ಸಾಧ್ಯತೆಯಿದೆ. ಹಾಗಾಗಿ ಉತ್ತಮ ಪ್ರದರ್ಶನ ತೋರುವ ಹಂಬಲ ಸದಾ ಕಾಪಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಏಷ್ಯಾ ಕಪ್ 2023 ಟೂರ್ನಿಯಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಈ ಪಂದ್ಯವು ಶ್ರೀಲಂಕಾದ ಪಲೇಕೆಲೆ ಮೈದಾನದಲ್ಲಿ ಶನಿವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.