ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಟ್ರೇಲಿಯಾದಲ್ಲಿ ‘ಎ’ ತಂಡದ ವಿರುದ್ಧ ಅಭ್ಯಾಸ ಪಂದ್ಯ?

Published : 8 ಅಕ್ಟೋಬರ್ 2024, 16:10 IST
Last Updated : 8 ಅಕ್ಟೋಬರ್ 2024, 16:10 IST
ಫಾಲೋ ಮಾಡಿ
Comments

ನವದೆಹಲಿ: ಭಾರತ ತಂಡವು, ಆಸ್ಟ್ರೇಲಿಯಾ ಪ್ರವಾಸಕ್ಕೆ ನಿಗದಿಗಿಂತ ಎರಡು ವಾರಗಳ ಮೊದಲೇ ನಿರ್ಗಮಿಸುವ ಸಾಧ್ಯತೆಯಿದೆ. ಪರ್ತ್‌ನಲ್ಲಿ ನವೆಂಬರ್ 22ರಂದು ಮೊದಲ ಕ್ರಿಕೆಟ್‌ ಟೆಸ್ಟ್‌ ಆರಂಭವಾಗಲಿದ್ದು, ಅದಕ್ಕೆ ಮೊದಲು ಭಾರತ ‘ಎ’ ತಂಡದ ಆಟಗಾರರ ಜೊತೆ ಅಭ್ಯಾಸ ಪಂದ್ಯಗಳನ್ನು ಆಡಿ ಸಜ್ಜಾಗುವುದು ಇದರ ಉದ್ದೇಶ.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ‍ಪ್ರವಾಸ ನವೆಂಬರ್ 5ರಂದು ಮುಗಿಯಲಿದೆ. ಈ ಸರಣಿಯ ಕೆಲವೇ ದಿನಗಳ ನಂತರ ತಂಡವು ಮುಂಬೈನಿಂದಲೇ ಆಸ್ಟ್ರೇಲಿಯಾಕ್ಕೆ ತೆರಳಲಿದೆ.

ಭಾರತ ಸೀನಿಯರ್ ತಂಡವು, ‘ಎ’ ತಂಡದ ಜೊತೆ ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ. ಇದರಿಂದ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಮತ್ತು ವಿಶ್ವಾಸ ಗಳಿಸಲು ಸಹಾಯವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್‌ ಸರಣಿ ಆಡಲು ಎ ತಂಡವು ಅಕ್ಟೋಬರ್‌ 25ರಂದು ಭಾರತದಿಂದ ತೆರಳಲಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT