ವಡೋದರ: ಎಡಗೈ ಸ್ಪಿನ್ನರ್ ಭಾರ್ಗವ್ ಭಟ್ ಅವರ (55ಕ್ಕೆ6) ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಬರೋಡ ತಂಡ, ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದ ಕೊನೆಯ ದಿನವಾದ ಸೋಮವಾರ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 84 ರನ್ಗಳಿಂದ ಸೋಲಿಸಿತು.

ಗೆಲುವಿಗೆ 262 ರನ್ ಗಳಿಸುವ ಸವಾಲಿನೊಂದಿಗೆ ಮುಂಬೈ ತಂಡ ಭಾನುವಾರ 2 ವಿಕೆಟ್ಗೆ 42 ರನ್ ಗಳಿಸಿತ್ತು. ಆದರೆ 42 ಬಾರಿಯ ಚಾಂಪಿಯನ್ನರು ಕೊನೆಯ ದಿನ 177 ರನ್ಗಳಿಗೆ ಆಲೌಟ್ ಆದರು. 34 ವರ್ಷದ ಭಟ್ 19.4 ಓವರುಗಳ ದಾಳಿಯಲ್ಲಿ ಮುಂಬೈ ಇನಿಂಗ್ಸ್ ಧ್ವಂಸಗೊಳಿಸಿದರು.

ಸಿದ್ದೇಶ್ ಲಾಡ್ (59) ಮತ್ತು ಶ್ರೇಯಸ್ ಅಯ್ಯರ್ (30) ಬಿಟ್ಟರೆ ಉಳಿದವರು ಹೋರಾಟ ತೋರಲಿಲ್ಲ.

ಸಂಕ್ಷಿಪ್ತ ಸ್ಕೋರು: ಬರೋಡ: 290 ಮತ್ತು 60.3 ಓವರುಗಳಲ್ಲಿ 185 (ಕೃಣಾಲ್ ಪಾಂಡ್ಯ 55; ತನುಷ್ ಕೋಟ್ಯಾನ್ 61ಕ್ಕೆ5); ಮುಂಬೈ: 214 ಮತ್ತು 48.2 ಓವರುಗಳಲ್ಲಿ 177 (ಸಿದ್ದೇಶ್ ಲಾಡ್ 59, ಶ್ರೇಯಸ್ ಅಯ್ಯರ್ 30; ಭಾರ್ಗವ್ ಭಟ್ 55ಕ್ಕೆ6, ಮಹೇಶ್ ಪಿತಿಯಾ 68ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.