ಬೆಂಗಳೂರು: ಕರ್ನಾಟಕದ ಯುವ ರೇಸರ್ ಪ್ರಗತಿ ಗೌಡ ಅವರು ತಮ್ಮ ನಾಲ್ಕನೇ ಅಂತರರಾಷ್ಟ್ರೀಯ ಸ್ಪರ್ಧೆಯಾದ ‘ರ್ಯಾಲಿ ಡು ಸೆಂಟರ್ ಅಲ್ಸೇಸ್’ ಟೂರ್ನಿಯಲ್ಲಿ 16ನೇ ಸ್ಥಾನ ಪಡೆದರು.

ಫ್ರಾನ್ಸ್ನಲ್ಲಿ ಭಾನುವಾರ ನಡೆದ ರ್ಯಾಲಿಯಲ್ಲಿ 67 ಇತರ ರೇಸರ್ಗಳೊಂದಿಗೆ ಸ್ಪರ್ಧಿಸಿದ 26 ವರ್ಷ ವಯಸ್ಸಿನ ಪ್ರಗತಿ, ಗಂಟೆಗೆ ಸರಾಸರಿ 108.5 ಕಿಲೋ ಮೀಟರ್ ವೇಗದಲ್ಲಿ ಕಾರನ್ನು ಚಲಾಯಿಸಿ ಗಮನ ಸೆಳೆದರು. ಈ ರ್ಯಾಲಿಯು ಒಟ್ಟು 306.11 ಕಿ.ಮೀ. ದೂರವಿತ್ತು.

ಮೊದಲ ಲೆಗ್ನಲ್ಲಿ 36ನೇ ಸ್ಥಾನ ಗಳಿಸಿದ್ದ ಪ್ರಗತಿ, ಎರಡನೇ ಲೆಗ್ನಲ್ಲಿ ಸವಾಲನ್ನು ಮೆಟ್ಟಿನಿಂತು ಆತ್ಮವಿಶ್ವಾಸದಿಂದ ಕ್ರಮಿಸಿ 16ನೇ ಸ್ಥಾನ ಪಡೆದರು.

ಪ್ಯಾರಿಸ್ನಲ್ಲಿ ಆಗಸ್ಟ್ನಲ್ಲಿ ನಡೆದ ‘ರ್ಯಾಲಿ ಡೆಸ್ ವ್ಯಾಲೀಸ್–2024’ ಟೂರ್ನಿಯಲ್ಲಿ ಪ್ರಗತಿ ಮೂರನೇ ಸ್ಥಾನ ಪಡೆದಿದ್ದರು. ಅದು ಅವರ ಚೊಚ್ಚಲ ಅಂತರರಾಷ್ಟ್ರೀಯ ರ್ಯಾಲಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.