ಬೆಂಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಅಂಧರ ಕ್ರಿಕೆಟ್ ತಂಡವು ಸೀಮಿತ ಓವರ್ಗಳ ಸರಣಿ ಆಡಲು ಜಮೈಕಾಗೆ ತೆರಳಲಿದೆ. ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ, ಜಮೈಕಾ ತಂಡದ ವಿರುದ್ಧ ಮೂರು ಏಕದಿನಹಾಗೂ ಎರಡು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಜುಲೈ 20ರಂದು ಮೊದಲ ಏಕದಿನ ಪಂದ್ಯ ನಿಗದಿಯಾಗಿದೆ. ಮರುದಿನ ಎರಡನೇ ಪಂದ್ಯ ನಡೆಯಲಿದೆ. ಜುಲೈ 24 ರಂದು ಮೊದಲ ಟ್ವೆಂಟಿ–20 ಪಂದ್ಯ ಹಾಗೂ ಮೂರನೇ ಏಕದಿನ ಪಂದ್ಯ ಜುಲೈ 25ರಂದು ನಡೆಯಲಿದೆ. 27 ರಂದು ಎರಡನೇ ಹಾಗೂ ಕೊನೆಯ ಟ್ವೆಂಟಿ–20 ಪಂದ್ಯ ನಡೆಯಲಿದೆ ಎಂದು ಪ್ರಕಟಣೆತಿಳಿಸಿದೆ.

ತಂಡ ಇಂತಿದೆ: ಬಿ1 ವರ್ಗ: ಅಮೋಲ್ ಕರ್ಚೆ, ಮೊಹಮದ್ ಜಾಫರ್ ಇಕ್ಬಾಲ್, ಬಸಪ್ಪ ವಡ್ಡಗೋಳ, ಸೋನು ಗೋಲ್ಕರ್ ಮತ್ತು ಚಂದ್ರಶೇಖರ್ ಕೆ.ಎನ್.

ಬಿ2 ವರ್ಗ: ಅಜಯ್ ಕುಮಾರ್ ರೆಡ್ಡಿ (ನಾಯಕ), ಡಿ ವೆಂಕಟೇಶ್ ಮತ್ತು ಸುರ್ಜಿತ್ ಗಾರಾ. ಬಿ3 ವರ್ಗ: ಸುನೀಲ್ ರಮೇಶ್, ದುರ್ಗಾ ರಾವ್, ಪಂಕಜ್ ಭುವೆ ಮತ್ತು ದೀಪಕ್ ಮಲಿಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.