ಬೆಂಗಳೂರು: ಮೂರನೇ ದಿನ ಶತಕ ಸಿಡಿಸಿ ಗಮನ ಸೆಳೆದಿದ್ದ ಅಭಿಷೇಕ್ ರೆಡ್ಡಿ, ಅಂತಿಮ ದಿನವಾದ ಗುರುವಾರವೂ ಕಲಾತ್ಮಕ ಆಟದ ಮೂಲಕ ಅಭಿಮಾನಿಗಳ ಮನಗೆದ್ದರು.

ಅಭಿಷೇಕ್ (219; 330ಎ, 27ಬೌಂ, 2ಸಿ) ಅವರ ದ್ವಿಶತಕದ ಬಲದಿಂದ ಕೆಎಸ್ಸಿಎ ಇಲೆವನ್ ತಂಡ ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಬಂಗಾಳ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡು ಸೆಮಿಫೈನಲ್ ಪ್ರವೇಶಿಸಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಎರಡನೇ ಮೈದಾನ ದಲ್ಲಿ ಜುಲೈ 28ರಿಂದ 31ರವರೆಗೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ತಂಡವು ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ಸೆಣಸಲಿದೆ.

ಆಲೂರಿನ ಮೊದಲ ಮೈದಾನದಲ್ಲಿ ನಡೆಯುವ ನಾಲ್ಕರ ಘಟ್ಟದ ಮತ್ತೊಂದು ಪೈಪೋಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇಲೆವನ್ ಮತ್ತು ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘ ಮುಖಾಮುಖಿಯಾಗಲಿವೆ.

ಆರ್ಎಸ್ಐ ಮೈದಾನದಲ್ಲಿ 7 ವಿಕೆಟ್ಗೆ 339ರನ್ಗಳಿಂದ ಗುರು ವಾರ ಎರಡನೇ ಇನಿಂಗ್ಸ್ನ ಆಟ ಮುಂದು ವರಿಸಿದ ಕೆಎಸ್ಸಿಎ ಇಲೆವನ್ 118 ಓವರ್ಗಳಲ್ಲಿ 478ರನ್ ಗಳಿಸಿತು.

ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಂಗಾಳ ತಂಡ 26 ಓವರ್ಗಳಲ್ಲಿ 4 ವಿಕೆಟ್ಗೆ 82ರನ್ ಗಳಿಸಿದ್ದ ವೇಳೆ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಬಿಜಿಎಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಸಂಸ್ಥೆ 215ರನ್ಗಳಿಂದ ಕೇರಳ ಸಂಸ್ಥೆ ಎದುರೂ, ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಛತ್ತೀಸಗಡ ರಾಜ್ಯ ಸಂಘ, ಇನಿಂಗ್ಸ್ ಮತ್ತು 47ರನ್ಗಳಿಂದ ಟೀಮ್ ರಾಜಸ್ಥಾನ ವಿರುದ್ಧವೂ, ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಆಂಧ್ರ ಸಂಸ್ಥೆ 5 ವಿಕೆಟ್ಗಳಿಂದ ಮಧ್ಯಪ್ರದೇಶ ಸಂಸ್ಥೆ ಎದುರೂ ಗೆದ್ದವು.

ಸಂಕ್ಷಿಪ್ತ ಸ್ಕೋರ್: ಕೆಎಸ್ಸಿಎ ಇಲೆವನ್: 117.3 ಓವರ್ಗಳಲ್ಲಿ 375 ಮತ್ತು 118 ಓವರ್ಗಳಲ್ಲಿ 478 (ಅಭಿಷೇಕ್ ರೆಡ್ಡಿ 219, ಜೆ.ಸುಚಿತ್ 59, ಶ್ರೇಯಸ್ ಗೋಪಾಲ್ ಔಟಾಗದೆ 46; ದುರ್ಗೇಶ್ ದುಬೆ 56ಕ್ಕೆ3, ಮಿತಿಲೇಶ್ ದಾಸ್ 118ಕ್ಕೆ3); ಬಂಗಾಳ ಕ್ರಿಕೆಟ್ ಸಂಸ್ಥೆ: 60 ಓವರ್ಗಳಲ್ಲಿ 235 ಮತ್ತು 26 ಓವರ್ಗಳಲ್ಲಿ 4 ವಿಕೆಟ್ಗೆ 82 (ಡೇವಿಡ್ ಮಥಿಯಾಸ್ 17ಕ್ಕೆ2). ಫಲಿತಾಂಶ: ಡ್ರಾ.

ಕಿಣಿ ಸ್ಪೋರ್ಟ್ಸ್ ಅರೇನಾ: ಮುಂಬೈ ಕ್ರಿಕೆಟ್ ಸಂಸ್ಥೆ: 112 ಓವರ್ಗಳಲ್ಲಿ 9 ವಿಕೆಟ್ಗೆ 418 ಡಿಕ್ಲೇರ್ಡ್ ಮತ್ತು 49 ಓವರ್ಗಳಲ್ಲಿ 7 ವಿಕೆಟ್ಗೆ 113 (ಕುಶಾಲ್ ಮಹೇಶ್ ವಧ್ವಾನಿ 35ಕ್ಕೆ4, ಆದಿತ್ಯ ಗೋಯಲ್ 35ಕ್ಕೆ2); ಕೆಎಸ್ಸಿಎ ಕೋಲ್ಟ್ಸ್: 105.2 ಓವರ್ ಗಳಲ್ಲಿ 302 (ಕಿಶನ್ ಎಸ್.ಬೆಡಾರೆ 34, ಎಸ್.ಎಸ್.ಸುಜಯ್ 32; ಶಶಾಂಕ್ ಅಟ್ಟಾರ್ಡೆ 82ಕ್ಕೆ3, ಶ್ರೇಯಸ್ ಗುರವ್ 67ಕ್ಕೆ3). ಫಲಿತಾಂಶ: ಡ್ರಾ.

ಬಿಜಿಎಸ್ ಮೈದಾನ: ಹಿಮಾಚಲ ಪ್ರದೇಶ ಸಂಸ್ಥೆ: 72.3 ಓವರ್ಗಳಲ್ಲಿ 208 ಮತ್ತು 81 ಓವರ್ಗಳಲ್ಲಿ 8 ವಿಕೆಟ್ಗೆ 237 ಡಿಕ್ಲೇರ್ಡ್ (ಪ್ರಿಯಾಂಶು ಖಂಡಾರಿ 118; ಸಿಜೊಮನ್ ಜೋಸೆಫ್ 58ಕ್ಕೆ4, ಕೆ.ಸಿ.ಅಕ್ಷಯ್ 56ಕ್ಕೆ3); ಕೇರಳ ಸಂಸ್ಥೆ: 47.3 ಓವರ್ಗಳಲ್ಲಿ 145 ಮತ್ತು 22.5 ಓವರ್ಗಳಲ್ಲಿ 86 (ಕನ್ವರ್ ಅಭಿನಯ್ 30ಕ್ಕೆ5, ವಿಪಿನ್ ಶರ್ಮಾ 18ಕ್ಕೆ2, ಮಯಂಕ್ ದಾಗರ್ 8ಕ್ಕೆ2). ಫಲಿತಾಂಶ: ಹಿಮಾಚಲ ಪ್ರದೇಶ ಸಂಸ್ಥೆಗೆ 215ರನ್ ಗೆಲುವು.

ಜಸ್ಟ್ ಕ್ರಿಕೆಟ್ ಮೈದಾನ: ಟೀಮ್ ರಾಜಸ್ಥಾನ: 91.4 ಓವರ್ಗಳಲ್ಲಿ 246 ಮತ್ತು 42.4 ಓವರ್ಗಳಲ್ಲಿ 88 (ವೀರಪ್ರತಾಪ್ ಸಿಂಗ್ 28ಕ್ಕೆ4, ಪುನೀತ್ ದತೇ 16ಕ್ಕೆ3); ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘ: 137.4 ಓವರ್ಗಳಲ್ಲಿ 381. ಫಲಿತಾಂಶ: ಛತ್ತೀಸಗಡ ತಂಡಕ್ಕೆ ಇನಿಂಗ್ಸ್ ಮತ್ತು 47ರನ್ ಗೆಲುವು.

ಆಲೂರು ಮೈದಾನ–3: ಡಿ.ವೈ.ಪಾಟೀಲ ಅಕಾಡೆಮಿ: 155 ಓವರ್ಗಳಲ್ಲಿ 7 ವಿಕೆಟ್ಗೆ 704 ಡಿಕ್ಲೇರ್ಡ್ ಮತ್ತು 60 ಓವರ್ಗಳಲ್ಲಿ 5 ವಿಕೆಟ್ಗೆ 229 (ಸರ್ಫರಾಜ್ ಖಾನ್ ಔಟಾಗದೆ 100; ಪಾರ್ಥ ರೆಖಾಡೆ 75ಕ್ಕೆ3); ವಿದರ್ಭ ಸಂಸ್ಥೆ: 104.4 ಓವರ್ಗಳಲ್ಲಿ 385. ಫಲಿತಾಂಶ: ಡ್ರಾ.

ಮೈಸೂರಿನಲ್ಲಿ ನಡೆದ ಪಂದ್ಯಗಳು: ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ: 41.5 ಓವರ್ಗಳಲ್ಲಿ 141 ಮತ್ತು 102 ಓವರ್ಗಳಲ್ಲಿ 9 ವಿಕೆಟ್ಗೆ 366 ಡಿಕ್ಲೇರ್ಡ್ (ಉತ್ಕರ್ಷ್ ಸಿಂಗ್ 119, ಸುಪ್ರಿಯೊ ಚಕ್ರವರ್ತಿ 52, ಸೌರಭ್ ತಿವಾರಿ 73; ಭವೇಶ್ ಗುಲೇಚಾ 42ಕ್ಕೆ3, ರಿತೇಶ್ ಭಟ್ಕಳ 82ಕ್ಕೆ2); ಕೆಎಸ್ಸಿಎ ಅಧ್ಯಕ್ಷರ ಇಲೆವನ್: 77.1 ಓವರ್ಗಳಲ್ಲಿ 261 ಮತ್ತು 4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 10. ಫಲಿತಾಂಶ: ಡ್ರಾ.

ಎಸ್ಜೆಸಿಇ ಮೈದಾನ: ಮಧ್ಯಪ್ರದೇಶ ಸಂಸ್ಥೆ: 89.4 ಓವರ್ಗಳಲ್ಲಿ 219 ಮತ್ತು 81 ಓವರ್ಗಳಲ್ಲಿ 164 (ಶೋಯಬ್ ಮೊಹಮ್ಮದ್ ಖಾನ್ 29ಕ್ಕೆ5); ಆಂಧ್ರ ಸಂಸ್ಥೆ: 75.5 ಓವರ್ಗಳಲ್ಲಿ 239 ಮತ್ತು 20.4 ಓವರ್ಗಳಲ್ಲಿ 5 ವಿಕೆಟ್ಗೆ 150. ಫಲಿತಾಂಶ: ಆಂಧ್ರ ಸಂಸ್ಥೆಗೆ 5 ವಿಕೆಟ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.