ಲಂಡನ್:'ಟಾಪ್ ಗೇರ್' ಟಿವಿ ಶೋ ಚಿತ್ರೀಕರಣದಲ್ಲಿ ನಿರತರಾಗಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ದಿಗ್ಗಜ ಆಟಗಾರಆಂಡ್ರ್ಯೋ ಫ್ಲಿಂಟಾಫ್ ಅವರ ಕಾರು ಮಂಗಳವಾರ ಬೆಳಿಗ್ಗೆ ಅಪಘಾತಕ್ಕೀಡಾಗಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂಗ್ಲೆಂಡ್ನದಕ್ಷಿಣ ಭಾಗದಲ್ಲಿರುವ ಸರ್ರೇ ಕೌಂಟಿಯಲ್ಲಿರುವ ದನ್ಸ್ಫೋಲ್ಡ್ ಏರೋಡಮ್ನಲ್ಲಿಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಫ್ಲಿಂಟಾಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬ್ರಿಟಿಷ್ ಬ್ರಾಡ್ಕಾಸ್ಟ್ ಕಾರ್ಪೊರೇಷನ್ (ಬಿಬಿಸಿ) ಖಚಿತಪಡಿಸಿದೆ.

ಫ್ಲಿಂಟಾಫ್ ಅವರ 16 ವರ್ಷದ ಮಗ ಕೋರಿ,ಘಟನೆಯಲ್ಲಿ ತಮ್ಮತಂದೆ ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು 'ಡೈಲಿ ಮೇಲ್'ಗೆತಿಳಿಸಿದ್ದಾರೆ.

ಇಂಗ್ಲೆಂಡ್ನ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿದ್ದ ಫ್ಲಿಂಟಾಫ್, 79 ಟೆಸ್ಟ್, 148 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. 2005 ಹಾಗೂ 2009ರಲ್ಲಿ ಆ್ಯಷಸ್ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ತಮ್ಮ 32ನೇ ವಯಸ್ಸಿನಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದ್ದರು.

45 ವರ್ಷದ ಅವರು ವಾಹನಗಳಿಗೆ ಸಂಬಂಧಿಸಿದ 'ಟಾಪ್ ಗೇರ್' ಸೇರಿದಂತೆ ಹಲವುಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.