ಬೆಂಗಳೂರು: ಮಯಂಕ್ ಅಗರವಾಲ್ ಅವರಿಂದ ವೀರೇಂದ್ರ ಸೆಹ್ವಾಲ್ ಶೈಲಿಯ ಬ್ಯಾಟಿಂಗ್ ನಿರೀಕ್ಷಿಸಿದ್ದೇನೆ ಎಂದು ಅವರ ಕೋಚ್ ಇರ್ಫಾನ್ ಸೇಠ್ ಹೇಳಿದರು.

ಮಂಗಳವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ’ಸೆಹ್ವಾಗ್ ಬ್ಯಾಟಿಂಗ್‌ನ ಎಲ್ಲ ಗುಣಗಳು ಮಯಂಕ್ ಅವರಲ್ಲಿವೆ. ಒಂದೇ ಒಂದು ವ್ಯತ್ಯಾಸವೆಂದರೆ ಮಯಂಕ್ ಸುಲಭವಾಗಿ ವಿಕೆಟ್ ಕಳೆದುಕೊಳ್ಳುವುದಿಲ್ಲ. ಅವರು ಆಕ್ರಮಣಕಾರಿ ಆಟದ ಮೂಲಕ ಭಾರತ ತಂಡದ ಆಸ್ತಿಯಾಗಬಲ್ಲರು’ ಎಂದರು. ‘ಮಯಂಕ್ ಯಾವುದೇ ಪಂದ್ಯಗಳನ್ನು ಲಘುವಾಗಿ ಕಾಣುವುದಿಲ್ಲ. ಅವರು ಗಂಭೀರ ಪ್ರವೃತ್ತಿಯ ಆಟಗಾರ. ಉತ್ತಮ ತಂತ್ರಗಳನ್ನು ಬಳಸಿ ಬ್ಯಾಟಿಂಗ್ ಮಾಡುವ ಅವರು ದೇಶಿ ಕ್ರಿಕೆಟ್‌ನಲ್ಲಿ ತೋರಿದ ಸಾಮರ್ಥ್ಯವನ್ನು ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲೂ ಮುಂದುವರಿಸುವ ಭರವಸೆ ಇದೆ’ ಎಂದರು.

‘ಮಯಂಕ್‌ಗೆ ಭಾರತ ತಂಡದಲ್ಲಿ ಈ ಹಿಂದೆಯೇ ಸ್ಥಾನ ಸಿಗದೇ ಇರುವುದಕ್ಕೆ ಬೇಸರವಿಲ್ಲ. ವ್ಯಕ್ತಿಯ ಬಾಳಿನಲ್ಲಿ ಅದೃಷ್ಟಕ್ಕೂ ಸ್ಥಾನವಿದೆ. ಅವರ ಅದೃಷ್ಟದ ಬಾಗಿಲು ಈಗ ತೆರೆದಿದೆ’ ಎಂದು ಸೇಠ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.