ಅಹಮದಾಬಾದ್ (ಪಿಟಿಐ): ಕೊನೆಯ ಓವರ್ನಲ್ಲಿ ಐದು ಸಿಕ್ಸರ್ ಸಿಡಿಸಿ ಕೋಲ್ಕತ್ತ ನೈಟ್ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಅವರಿಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.

ತಂಡದ ಗೆಲುವಿಗೆ ಕೊನೆಯ ಓವರ್ನಲ್ಲಿ 29 ರನ್ಗಳ ಅಗತ್ಯವಿದ್ದಾಗ ರಿಂಕು ಸತತ ಐದು ಸಿಕ್ಸರ್ ಸಿಡಿಸಿದ್ದ ದಾಖಲೆ ಬರೆದರು. ರಿಂಕು ಸಿಕ್ಸರ್ ಸಿಡಿಸಲು ಬಳಸಿದ ಬ್ಯಾಟ್ ಕೆಕೆಆರ್ ನಾಯಕ ನಿತೀಶ್ ರಾಣಾ ಅವರದ್ದಾಗಿತ್ತು.

‘ಈ ಆವೃತ್ತಿಯಲ್ಲಿ ನಾನು ಎರಡೂ ಪಂದ್ಯಗಳಲ್ಲಿ ಬಳಸಿದ್ದ ಬ್ಯಾಟ್ ಇದು. ಅದರಲ್ಲಿ ರಿಂಕು ಆಡಿದರು. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿಯೂ ಇದೇ ಬ್ಯಾಟ್ ಬಳಸಿದ್ದೆ. ಈ ಪಂದ್ಯದಲ್ಲಿ ನಾನು ಬ್ಯಾಟ್ ಬದಲಿಸಿದ್ದೆ. ಆಗ ಈ ಹಿಂದೆ ಬಳಕೆಯಾಗಿದ್ದ ಬ್ಯಾಟ್ ಆನ್ನು ರಿಂಕು ಕೇಳೀದ್ದರು. ಆದರೆ ಆರಂಭದಲ್ಲಿ ಕೊಡಲು ನಾನು ಒಪ್ಪಿರಲಿಲ್ಲ. ಆಮೇಲೆ ಡ್ರೆಸ್ಸಿಂಗ್ ಕೋಣೆಯಿಂದ ಒಬ್ಬರು ರಿಂಕುಗೆ ಈ ಬ್ಯಾಟ್ ತಂದುಕೊಟ್ಟರು’ ಎಂದು ರಾಣಾ ಭಾನುವಾರ ಪಂದ್ಯದ ನಂತರ ಹೇಳಿದರು.

‘ಆ ಬ್ಯಾಟ್ ನನಗೆ ತುಂಬಾ ಹಗುರವೆನಿಸುತ್ತಿತ್ತು. ಆದರೆ ರಿಂಕುಗೆ ಅದು ಸರಿಯಾಗಿ ಗ್ರಿಪ್ ಆಗಿದೆ. ಆದ್ದರಿಂದ ಚೆನ್ನಾಗಿ ಆಡಿದರು. ಇನ್ನು ಮುಂದೆ ಅದು ಅವರದ್ದೇ (ರಿಂಕು) ಬ್ಯಾಟು’ ಎಂದು ರಾಣಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.