ತುಂಬಾ ಕಸರತ್ತು ನಡೆಸಬಾರದು. ಆದರೆ,ವ್ಯಾಯಾಮದ ಹಿತಾನುಭವ ಮಾತ್ರ ದೊರೆಯಬೇಕು.ದೇಹ ಸಪೂರವಾಗಬೇಕುಎನ್ನುವವರಿಗೆ ಹಲವು ಸಾಧನಗಳು ಮಾರುಕಟ್ಟೆಗೆ ಬಂದಿವೆ.ಇವುಗಳಲ್ಲಿ ಫೋಮ್ ರೋಲರ್ ಕೂಡ ಒಂದು.

ಮೂರರಿಂದ ನಾಲ್ಕು ಇಂಚುಗಳ ಅಗಲ, 36ಇಂಚು ಉದ್ದವಾದ,ದಿಂಬಿಂತೆ ಕಾಣುವ ಇದು ನಮ್ಮ ಸ್ನಾಯುಗಳಿಗೆ ಚೈತನ್ಯದಾಯಕ ವ್ಯಾಯಾಮಗಳನ್ನು ಮಾಡಿಸುತ್ತದೆ.ಅರ್ಥಾತ್ ನಾವು ಮಾಡಬೇಕು.ಇದು ಮಸಾಜ್ ಸಾಧನದಂತೆಯೂ ವರ್ತಿಸುತ್ತದೆ.

ನಮ್ಮ ದೇಹದ ಭಾರ ಮತ್ತು ರೋಲರ್ ನ ಚಲನೆ ಎರಡರ ಮಿಳಿತ ನಮ್ಮ ಬೊಜ್ಜನ್ನು ಕರಗಿಸಬಲ್ಲದು. ಇಲ್ಲದೆ,ಈ ವ್ಯಾಯಾಮದಲ್ಲಿ ತೊಡಗಬಾರದು.ದೇಹದ ಮೊಣಕಾಲು,ತೊಡೆ,ಪೃಷ್ಠ,ಬೆನ್ನು,ಕತ್ತು ಎಲ್ಲ ಭಾಗಗಳಿಗೂ ರೋಲರ್ ನಿಂದ ವ್ಯಾಯಾಮ ನೀಡಬಹುದು.ಇದನ್ನು ಬಳಸಿ ವ್ಯಾಯಾಮ ಮಾಡುವಾಗ, ‘ಕೊಬ್ಬು ಸಂಗ್ರಹವಾಗಿರುವ ಭಾಗಗಳನ್ನು ಚಪಾತಿ ಕೋಲಿನಂತೆ ಇದು ಚಪ್ಪಟೆ ಮಾಡುತ್ತದೆ ಎನ್ನುವ ಅನುಭವ ಸಿಗುವುದಂತೂ ದಿಟ’

ಸ್ನಾಯು ಒತ್ತಡ ಕಡಿಮೆ ಮಾಡುವ ಇದನ್ನು ಬಳಸಿ ವ್ಯಾಯಾಮವನ್ನು ಅಥ್ಲಿಟ್ ಗಳು,ಕ್ರೀಡಾ ಪಟುಗಳನ್ನು ದಶಕಗಳಹಿಂದೆಯೇ ಮಾಡುತ್ತಿದ್ದರು.ಸಾಮಾನ್ಯರು ಇದನ್ನು ಬಳಸಲು ಆರಂಭಿಸಿದದ್ದು ದಶಕದ ಈಚೆಗೆ ಎಂದು ಹೇಳಬಹುದು.ಫಿಟ್ ನೆಸ್ ನ ಗುಟ್ಟು ಫೋಮ್ ರೋಲರ್ ನಲ್ಲಿದೆ ಎಂದು ಪರಿಗಣಿಸುವ ಮಟ್ಟಿಗೆ ಇಂದು ಜನಪ್ರಿಯವಾಗಿದೆ.

ರಕ್ತ ಪರಿಚಲನೆ ಹೆಚ್ಚಿಸುತ್ತದೆ:ಸ್ನಾಯುಗಳ ಮೇಲೆ ದೇಹದ ಭಾರವನ್ನು ರೋಲರ್ ಬೀಳಿಸುತ್ತದೆ.ಅದರ ಚಲನೆಯು ಸ್ನಾಯುಗಳ ಚಲನೆಯನ್ನು ಸರಾಗಗೊಳಿಸುತ್ತದೆ.ಹೀಗಾಗಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ಸ್ನಾಯುಗಳ ಬಲ ಹೆಚ್ಚಿಸುತ್ತದೆ:ರೋಲರ್ ಅನ್ನು‘ಮಾಸ್ಟರ್ ಆಫ್ ಮಸಲ್’ಎಂತಲೂ ಕರೆಯುತ್ತಾರೆ.ಸ್ನಾಯು ಜಾಲಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ.ಅಲ್ಲದೆ,ಸ್ನಾಯುಗಳಲ್ಲಿ ಸ್ಥಗಿತತೆ ಉಂಟಾಗಿದ್ದರೆ,ಇದು ತೊಂದರೆಗಳನ್ನು ಪರಿಹರಿಸುತ್ತದೆ.

ಕಾಲುಗಳಿಗೆ ವ್ಯಾಯಾಮ ಮಾಡುವಾಗ ಒಂದು ಕಾಲಿನ ಮೇಲೆ ಇನ್ನೊಂದು ಕಾಲಿನ ಭಾರವನ್ನು ಬಿಡಬೇಕು.ನಂತರ ರೋಲರ್ ಚಲನೆಯನ್ನು ಮಾಡಬೇಕು.ಆಗ ಮಾತ್ರ ಸ್ನಾಯುಗಳಿಗೆ ಪರಿಪೂರ್ಣ ವ್ಯಾಯಾಮ ದೊರೆಯುತ್ತದೆ.ಇದು ತೊಡೆಗಳಿಗೂ ಅನ್ವಯಿಸುತ್ತದೆ.ಶಿಲೆಯನ್ನು ಕಡೆಯುವಂತೆ ರೋಲರ್ ನಮ್ಮ ದೇಹದ ಸ್ನಾಯುಗಳನ್ನು ಕಡೆಯುತ್ತದೆ.

ಒಟ್ಟಿನಲ್ಲಿ ಫೋಮ್ ರೋಲರ್ ಬಳಸಿ ಸರಳ ವ್ಯಾಯಾಮಗಳ ಮೂಲಕ ದೇಹವನ್ನು ಸಪೂರವಾಗಿಸಿಕೊಳ್ಳಬಹುದು.ಇದನ್ನು ಬಳಸಿ ವ್ಯಾಯಾಮ ಮಾಡಲು ಯೂಟ್ಯೂಬ್ ಅಥವಾ ಜಾಲತಾಣದ ಮೊರೆ ಹೋಗುವುದು ಅನಿವಾರ್ಯ.ಮಾರ್ಗದರ್ಶನ ಇಲ್ಲದೆ ವ್ಯಾಯಾಮ ಮಾಡಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.