ಶಾರ್ಜಾ: ಅಫ್ಗಾನಿಸ್ತಾನ ತಂಡವು ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ತಂಡವನ್ನು ಶುಕ್ರವಾರ 177 ರನ್‌ಗಳ ದೊಡ್ಡ ಅಂತರದಿಂದ ಸೋಲಿಸಿತು. ರಹಮಾನುಲ್ಲಾ ಗುರ್ಬಾಝ್ ಏಕದಿನ ಪಂದ್ಯಗಳಲ್ಲಿ ಏಳು ಶತಕ ಹೊಡೆದ ಮೊದಲ ಅಫ್ಗನ್ ಕ್ರಿಕೆಟಿಗ ಎನಿಸಿದರು. ನಂತರ ಸ್ಪಿನ್ ಬೌಲರ್ ರಶೀದ್ ಖಾನ್ ಐದು ವಿಕೆಟ್ ಗೊಂಚಲಿನೊಡನೆ ತಂಡದ ಗೆಲುವಿಗೆ ನೆರವಾದರು.

ಗುರ್ಬಾಝ್ ಅವರ 105 ರನ್‌ಗಳ ನೆರವಿನಿಂದ ಅಫ್ಗಾನಿಸ್ತಾನ 4 ವಿಕೆಟ್‌ಗೆ 311 ರನ್‌ಗಳ ದೊಡ್ಡ ಮೊತ್ತ ಪೇರಿಸಿತು. ದಕ್ಷಿಣ ಆಫ್ರಿಕಾ 35ನೇ ಓವರಿನಲ್ಲಿ 134 ರನ್‌ಗಳಿಗೆ ಉರುಳಿತು. ಲೆಗ್ ಸ್ಪಿನ್ನರ್ ರಶೀದ್ 9 ಓವರುಗಳಲ್ಲಿ ಕೇವಲ 19 ರನ್ನಿತ್ತು 5 ವಿಕೆಟ್ ಪಡೆದರು. ಎಡಗೈ ಸ್ಪಿನ್ನರ್ ನಂಗೇಯಲಿಯ ಖರೋಟೆ 26 ರನ್ನಿಗೆ 4 ವಿಕೆಟ್ ಉರುಳಿಸಿದರು.

ಮೊದಲ ವಿಕೆಟ್‌ಗೆ 71 ರನ್ ಸೇರಿಸಿದ್ದ ನಾಯಕ ಬವುಮಾ ಮತ್ತು ಟೋನಿ ಡಿ ಝೋರ್ಜಿ ನಿರ್ಗಮಿಸಿದ ನಂತರ ಹೋರಾಟ ತೋರಲಿಲ್ಲ. 63 ರನ್ ಅಂತರದಲ್ಲಿ ಹರಿಣಗಳ ತಂಡ 9 ಆಟಗಾರರು ಸ್ಪಿನ್ ಬಲೆಗೆ ಬಿದ್ದವು.

ಇದು ಅಫ್ಗನ್ ತಂಡಕ್ಕೆ, ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಜಯ. ಸರಣಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ಸ್ಕೋರುಗಳು:

ಅಫ್ಗಾನಿಸ್ತಾನ: 50 ಓವರುಗಳಲ್ಲಿ 4 ವಿಕೆಟ್‌ಗೆ 311 (ರಹಮಾನುಲ್ಲಾ ಗುರ್ಬಾಝ್ 105, ರಹಮತ್ ಶಾ 50, ಅಜ್ಮತ್‌ವುಲ್ಲಾ ಒಮರ್‌ಝೈ ಔಟಾಗದೇ 86);

ದಕ್ಷಿಣ ಆಫ್ರಿಕಾ: 34.2 ಓವರುಗಳಲ್ಲಿ 134 (ತೆಂಬಾ ಬವುಮಾ 31, ಟೋನಿ ಡಿ ಝೋರ್ಜಿ 34; ರಶೀದ್ ಖಾನ್ 19ಕ್ಕೆ5, ಟೋನಿ ಡಿ ಝೋರ್ಜಿ 26ಕ್ಕೆ5). ಪಂದ್ಯದ ಆಟಗಾರ: ರಶೀದ್ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.