ಅಹಮದಾಬಾದ್: ಈ ಬಾರಿಯ ಐಪಿಎಲ್ನ ಹೆಚ್ಚಿನ ಪಂದ್ಯಗಳಲ್ಲಿ ದೊಡ್ಡ ಮೊತ್ತಗಳು ದಾಖಲಾಗಲು ಇಂಪ್ಯಾಕ್ಟ್ ಪ್ಲೇಯರ್ ನಿಯಮ ಕಾರಣ ಎಂಬುದನ್ನು ಹಿರಿಯ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಒಪ್ಪುವುದಿಲ್ಲ. ಬ್ಯಾಟರ್ಗಳ ಕೌಶಲಗಳೂ ಇದಕ್ಕೆ ಕಾಣಿಕೆ ನೀಡಿವೆ ಎಂದು ಅವರು ಹೇಳುತ್ತಾರೆ.

ಆಟದಲ್ಲಿ ಉಳಿಯಲು ಬೌಲರ್ಗಳು ತಮ್ಮ ಬ್ಯಾಟಿಂಗ್ ಸುಧಾರಿಸುವ ಕಡೆಯೂ ಗಮನಹರಿಸಬೇಕು ಎಂದೂ ಅಶ್ವಿನ್ ಬೌಲರ್ಗಳಿಗೆ ಒತ್ತಾಯಿಸಿದ್ದಾರೆ.

ಈ ಋತುವಿನಲ್ಲಿ ಹಲವು ಬ್ಯಾಟಿಂಗ್ ದಾಖಲೆಗಳು ಮೂಡಿಬಂದಿವೆ. 41 ಬಾರಿ ತಂಡಗಳು 200ರ ಗಡಿ ದಾಟಿವೆ. ಎಂಟು ಬಾರಿ 250ಕ್ಕಿಂತ ಹೆಚ್ಚಿನ ಮೊತ್ತ ಕಲೆಹಾಕಿವೆ. ಐಪಿಎಲ್ನ ಸರ್ವಾಧಿಕ ಮೊತ್ತ 287 ದಾಖಲಾಗಿದ್ದು ಕೂಡ ಹಾಲಿ ಆವೃತ್ತಿಯಲ್ಲೇ.

‘ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇಲ್ಲದಿದ್ದರೂ, ಹೆಚ್ಚಿನ ಮೊತ್ತಗಳು ದಾಖಲಾಗುತ್ತಿದ್ದವು’ ಎಂದು ಬುಧವಾರ ಎಲಿಮಿನೇಟರ್ ಪಂದ್ಯದ ನಂತರ ಜಿಯೊ ಸಿನಿಮಾ ಮ್ಯಾಚ್ ಸೆಂಟರ್ ಲೈವ್ನಲ್ಲಿ ಅಶ್ವಿನ್ ತಿಳಿಸಿದ್ದಾರೆ.

‘ನನ್ನ ಅಭಿಪ್ರಾಯದ ಪ್ರಕಾರ ಬ್ಯಾಟರ್ಗಳು ಹೆಚ್ಚು ವಿಶ್ವಾಸದಿಂದ ಆಡುತ್ತಿದ್ದಾರೆ. ಎಲ್ಲೆಡೆಯ ಪಿಚ್ಗಳೂ ಇದಕ್ಕೆ ಕೊಡುಗೆ ನೀಡಿವೆ’ ಎಂದಿದ್ದಾರೆ.

‘ಭವಿಷ್ಯದಲ್ಲಿ ಬೌಲರ್ಗಳೂ ವೇಗವಾಗಿ ರನ್ಗಳಿಸುವ ಕಲೆ ಸಿದ್ಧಿಸಿಕೊಳ್ಳಬೇಕಾಗಿದೆ. ನಾವು ಎಷ್ಟೇ ಚೆನ್ನಾಗಿ ಬೌಲಿಂಗ್ ಮಾಡಿದರೂ, ಬ್ಯಾಟಿಂಗ್ ಕೂಡ ಗೊತ್ತಿರಬೇಕು. ಆಟ ಆ ದಿಕ್ಕಿನತ್ತ ಸಾಗುತ್ತಿದೆ’ ಎಂದಿದ್ದಾರೆ.

ಈ ನಿಯಮವನ್ನು ಟೀಕಿಸಿರುವ ರೋಹಿತ್ ಶರ್ಮಾ, ಇದು ಆಲ್ರೌಂಡರ್ಗಳ ಬೆಳವಣಿಗೆಗೆ ತೊಡಕಾಗುತ್ತಿದೆ ಎಂದಿದ್ದರು. ಇನ್ನೊಂದೆಡೆ ವಿರಾಟ್ ಕೊಹ್ಲಿ ಅವರು ‘ಈ ನಿಯಮ ಆಟದ ಸಮತೋಲನವನ್ನು ಹಾಳುಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

2023ರ ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ತರಲಾಗಿತ್ತು. ‘ಇದು ಪರೀಕ್ಷಾರ್ಥವಾಗಿ ಜಾರಿಗೊಳಿಸಿದ್ದು, ಶಾಶ್ವತವಲ್ಲ. ಎಲ್ಲ ಭಾಗೀದಾರರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರುವುದಾಗಿ’ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.