ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ

Published : 10 ಅಕ್ಟೋಬರ್ 2024, 6:54 IST
Last Updated : 10 ಅಕ್ಟೋಬರ್ 2024, 6:54 IST
ಫಾಲೋ ಮಾಡಿ
Comments

ದುಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಶೆಫಾಲಿ ವರ್ಮಾ ಅವರು ಟಿ20 ಮಾದರಿಯಲ್ಲಿ ವೇಗವಾಗಿ 2,000 ರನ್ ಪೂರೈಸಿದ ಬ್ಯಾಟರ್‌ ಎನಿಸಿದ್ದಾರೆ.

ಮಹಿಳೆಯರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಅವರು ಈ ಸಾಧನೆ ಮಾಡಿದ್ದಾರೆ. ಶೆಫಾಲಿ ಅವರಿಗೆ ಈಗ 20 ವರ್ಷ 255 ದಿನಗಳಾಗಿವೆ.

ಇದಕ್ಕೂ ಮುನ್ನ ಈ ದಾಖಲೆ, ಐರ್ಲೆಂಡ್‌ನ ಗ್ಯಾಬಿ ಲೆವಿಸ್‌ ಅವರ ಹೆಸರಿನಲ್ಲಿತ್ತು. ಅವರು 23 ವರ್ಷ 35ನೇ ದಿನದಲ್ಲಿದ್ದಾಗ 2,000 ರನ್‌ ಗಡಿ ದಾಟಿದ್ದರು.

ಲಂಕಾ ಎದುರು ಭಾರತಕ್ಕೆ ಜಯ

ದುಬೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 172 ರನ್‌ ಗಳಿಸಿತು.

ಆರಂಭಿಕ ಬ್ಯಾಟರ್‌ ಸ್ಮೃತಿ ಮಂದಾನ 38 ಎಸೆತಗಳಲ್ಲಿ 50 ರನ್ ಗಳಿಸಿದರೆ, ಶೆಫಾಲಿ 40 ಎಸೆತಗಳಲ್ಲಿ 46 ರನ್ ಗಳಿಸಿದರು. ನಂತರ ಬೀಸಾಟವಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಕೇವಲ 27 ಎಸೆತಗಳಲ್ಲಿ 52 ರನ್ ಬಾರಿಸಿದರು.

ಗುರಿ ಬೆನ್ನತ್ತಿದ ಲಂಕಾ ಪಡೆ 90 ರನ್‌ ಗಳಿಸಿ, ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಆಲೌಟ್‌ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT