ಚೆನ್ನೈ: ಇಲ್ಲಿಯ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್‌ಗಳಿಗೆ ಆಲೌಟ್ ಆಯಿತು.

ಮೊದಲ ದಿನದಾಟದಲ್ಲಿ 144 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಆತಿಥೇಯ ತಂಡಕ್ಕೆ ಅಶ್ವಿನ್–ಜಡೇಜ ಜೋಡಿಯು ಮರುಜೀವ ತುಂಬಿತು. ಇಬ್ಬರೂ ಸೇರಿ ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 195 ರನ್ ಸೇರಿಸಿದರು. ಇದರಿಂದಾಗಿ ತಂಡವು ದಿನದಾಟದ ಮುಕ್ತಾಯಕ್ಕೆ 80 ಓವರ್‌ಗಳಲ್ಲಿ 6ಕ್ಕೆ339 ರನ್‌ಗಳ ಉತ್ತಮ ಮೊತ್ತ ಪೇರಿಸಿತ್ತು.

ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ಭಾರತ 376 ರನ್‌ಗಳಿಗೆ ಆಲೌಟ್ ಆಯಿತು. ಅಶ್ವಿನ್ 113, ಜಡೇಜ 86 ರನ್ ಹೊಡೆದು ಸೂಪರ್ ಹೀರೊಗಳಂತೆ ಕಂಗೊಳಿಸಿದರು. ನಿನ್ನೆ ಜೈಸ್ವಾಲ್ 56, ಪಂತ್ 39 ರನ್ ಹೊಡೆದು ಔಟಾಗಿದ್ದರು.

ಬಾಂಗ್ಲಾದೇಶದ 24 ವರ್ಷ ವಯಸ್ಸಿನ ಮೆಹಮೂದ್ ಹಸನ್ ಆತಿಥೇಯ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು. ಇವರು 5 ವಿಕೆಟ್ ಕಬಳಿಸಿದರೆ, ಟಸ್ಕಿನ್ ಅಹಮ್ಮದ್ 3 ವಿಕೆಟ್ ಪಡೆದರು.

ಸ್ಕೋರ್...

ಭಾರತ ಮೊದಲ ಇನ್ನಿಂಗ್ಸ್: 376 ( 91.2 ಓವರ್)

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್: 8/1 (3 ಓವರ್) ( ಬೆಳಗ್ಗೆ 11ಗಂಟೆ ವೇಳೆಗೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.