ರಾಂಚಿ: ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇದರಿಂದಾಗಿ ಭಾರತ ನೆಲದಲ್ಲಿ ಐತಿಹಾಸಿಕ ಸರಣಿ ಜಯಿಸಲು ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಆಂಗ್ಲರ ಪಡೆ ಸಿಲುಕಿದೆ.

ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್, ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಿರುಗೇಟು ನೀಡುವ ಇರಾದೆಯಲ್ಲಿದೆ. ಇದಕ್ಕಾಗಿ ರಣತಂತ್ರ ಹೆಣೆಯುತ್ತಿದೆ.

ರಾಂಚಿ ಟೆಸ್ಟ್ ಪಂದ್ಯದಲ್ಲಿ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡುವ ಸಾಧ್ಯತೆಯಿದೆ. ಈ ಕುರಿತು ಉಪನಾಯಕ ಓಲಿ ಪೋಪ್ ಸುಳಿವು ನೀಡಿದ್ದಾರೆ.

ಖಂಡಿತವಾಗಿಯೂ ಸ್ಟೋಕ್ಸ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ನಿರೀಕ್ಷೆಯಿದೆ. ಅವರು ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿರುವುದಾಗಿ ಪೋಪ್ ತಿಳಿಸಿದ್ದಾರೆ.

ಆದರೂ ವೈದ್ಯಕೀಯ ಸಲಹೆಯನ್ನು ಪರಿಗಣಿಸಬೇಕಾಗುತ್ತದೆ ಎಂದು ಪೋಪ್ ಹೇಳಿದ್ದಾರೆ.
.ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಬಹುದು.PHOTOS | ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದ ವಿರಾಟ್ ಕೊಹ್ಲಿ.
ಕಳೆದ ವರ್ಷ ನವೆಂಬರ್ನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ಟೋಕ್ಸ್, ಬಳಿಕ ಬೌಲಿಂಗ್ ಮಾಡಿರಲಿಲ್ಲ.

ರಾಜ್ಕೋಟ್ನಲ್ಲಿ ಸ್ಟೋಕ್ಸ್ ಅವರ 100ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ಗೆ ಹೀನಾಯ ಸೋಲು ಎದುರಾಗಿತ್ತು. ಮತ್ತೊಂದೆಡೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಬೃಹತ್ ಗೆಲುವು (432 ರನ್ ಅಂತರದಲ್ಲಿ) ದಾಖಲಿಸಿತ್ತು.

ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೋಕ್ಸ್ ಅವರಿಗೆ 200 ವಿಕೆಟ್ ಗಳಿಸಲು ಇನ್ನೂ ಕೇವಲ ಮೂರು ವಿಕೆಟ್ಗಳ ಅಗತ್ಯವಿದೆ. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 6,000 ರನ್ ಹಾಗೂ 200 ವಿಕೆಟ್ ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ರಾಂಚಿಯ ಪಿಚ್ನಲ್ಲಿ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ನೆರವು ದೊರಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಹಾಗೂ ಮಾರ್ಕ್ ವುಡ್ ಅವರಿಗೆ ಇಂಗ್ಲೆಂಡ್ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.