ಧರ್ಮಶಾಲಾ: ಭಾರತ ವಿರುದ್ಧ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ತರಲಾಗಿದೆ.

ಒಂದು ದಿನ ಮುಂಚಿತವಾಗಿ ತಾನು ಆಡುವ 11ರ ಬಳಗವನ್ನು ಇಂಗ್ಲೆಂಡ್ ಪ್ರಕಟಿಸಿದೆ. ವೇಗದ ಬೌಲರ್ ಓಲಿ ರಾಬಿನ್ಸನ್ ಸ್ಥಾನಕ್ಕೆ ಮಾರ್ಕ್ ವುಡ್ ಪುನರಾಗಮನ ಮಾಡಿಕೊಂಡಿದ್ದಾರೆ. ರಾಂಚಿ ಟೆಸ್ಟ್ ಪಂದ್ಯದಲ್ಲಿ ರಾಬಿನ್ಸನ್ ಆಕರ್ಷಕ ಅರ್ಧಶತಕ ಗಳಿಸಿದರೂ ಬೌಲಿಂಗ್ನಲ್ಲಿ ಪರಿಣಾಮಕಾರಿ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ರೋಹಿತ್ ಶರ್ಮಾ ಬಳಗವು, 3-1ರ ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಸರಣಿಯ ಅಂತಿಮ ಪಂದ್ಯ ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಪ್ರತಿ ಪಂದ್ಯವೂ ಮಹತ್ವ ಗಿಟ್ಟಿಸಿಕೊಂಡಿರುವುದರಿಂದ ಇತ್ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಮುಖ್ಯವೆನಿಸಿದೆ.

ಇಂಗ್ಲೆಂಡ್ ಆಡುವ 11ರ ಬಳಗ ಇಂತಿದೆ:

1. ಜಾಕ್ ಕ್ರಾಲಿ

2. ಬೆನ್ ಡಕೆಟ್

3. ಓಲಿ ಪೋಪ್

4. ಜೋ ರೂಟ್

5. ಜಾನಿ ಬೆಸ್ಟೊ

6. ಬೆನ್ ಸ್ಟೋಕ್ಸ್ (ನಾಯಕ)

7. ಬೆನ್ ಫೋಕ್ಸ್

8. ಟಾಮ್ ಹಾರ್ಟ್ಲಿ

9. ಮಾರ್ಕ್ ವುಡ್

10. ಜೇಮ್ಸ್ ಆ್ಯಂಡರ್ಸನ್

11. ಶೋಯಬ್ ಬಷೀರ್.

ಫಲಿತಾಂಶ:

ಮೊದಲ ಟೆಸ್ಟ್ (ಹೈದರಾಬಾದ್): ಇಂಗ್ಲೆಂಡ್ಗೆ 28 ರನ್ ಜಯ

ಎರಡನೇ ಟೆಸ್ಟ್ (ವಿಶಾಖಪಟ್ಟಣ): ಭಾರತಕ್ಕೆ 106 ರನ್ ಜಯ

ಮೂರನೇ ಟೆಸ್ಟ್ (ರಾಜ್ಕೋಟ್): ಭಾರತಕ್ಕೆ 434 ರನ್ ಜಯ

ನಾಲ್ಕನೇ ಟೆಸ್ಟ್ (ರಾಂಚಿ): ಭಾರತಕ್ಕೆ 5 ವಿಕೆಟ್ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.