ಬೆಂಗಳೂರು: ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾದರೆ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು.

ಇಂದು ಮೂರನೇ ದಿನದಾಟದಲ್ಲಿ ರನ್ ಮಳೆಯೇ ಹರಿದಿದ್ದು, ಒಟ್ಟಾರೆ 453 ರನ್ ಕಲೆ ಹಾಕಲಾಗಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದ್ದ ಪ್ರವಾಸಿಗರ ತಂಡ ಇಂದು 402 ರನ್ ಪೇರಿಸಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಆ ಮೂಲಕ ಇಂದು 222 ರನ್ಗಳನ್ನು ಪೇರಿಸಿತ್ತು.

ದ್ವಿತೀಯ ಇನಿಂಗ್ಸ್ನಲ್ಲಿ ದಿಟ್ಟ ಹೋರಾಟ ತೋರಿದ ಟೀಮ್ ಇಂಡಿಯಾ, ಮೂರನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದೆ.

ಆ ಮೂಲಕ ಒಂದು ದಿನದ ಅವಧಿಯಲ್ಲಿ ಒಟ್ಟು 453 ರನ್ಗಳು ಹರಿದು ಬಂದವು. ಇದು ಭಾರತ ನೆಲದಲ್ಲಿ ಟೆಸ್ಟ್ ಪಂದ್ಯದ ದಿನವೊಂದರಲ್ಲಿ ದಾಖಲಾಗಿರುವ ಎರಡನೇ ಗರಿಷ್ಠ ಮೊತ್ತವಾಗಿದೆ.

2009ರಲ್ಲಿ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಣ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ 470 ರನ್ಗಳು ದಾಖಲಾಗಿತ್ತು. ಇದು ಭಾರತದಲ್ಲಿ ಟೆಸ್ಟ್ ಪಂದ್ಯದ ದಿನವೊಂದರಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.

ಇತ್ತೀಚಿಗಿನ ಕಾನ್ಪುರದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲೂ 437 ರನ್ ದಾಖಲಾಗಿತ್ತು.
.ರೋಹಿತ್, ಕೊಹ್ಲಿ, ಸರ್ಫರಾಜ್ ಫಿಫ್ಟಿ; ರೋಚಕ ಹಂತದಲ್ಲಿ ಬೆಂಗಳೂರು ಟೆಸ್ಟ್.ಟೆಸ್ಟ್ನಲ್ಲಿ 9,000 ರನ್: ಸಚಿನ್, ದ್ರಾವಿಡ್, ಗವಾಸ್ಕರ್ ಸಾಲಿಗೆ ಕಿಂಗ್ ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.