ಮೈಸೂರು: ಶುಭಮನ್ ಗಿಲ್ ಮತ್ತು ಕರುಣ್ ನಾಯರ್ ಅವರ ಛಲದ ಆಟದಿಂದ ಭಾರತ ‘ಎ’ ತಂಡ ಮಂಗಳವಾರ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಆರಂಭವಾದ ನಾಲ್ಕು ದಿನಗಳ ಕ್ರಿಕೆಟ್ ‘ಟೆಸ್ಟ್’ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆಯಿಟ್ಟಿದೆ.

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ ವೃದ್ಧಿಮಾನ್ ಸಹಾ ಬಳಗ ಮೊದಲ ಇನಿಂಗ್ಸ್ನಲ್ಲಿ 74 ಓವರ್ಗಳಲ್ಲಿ 3 ವಿಕೆಟ್ಗೆ 233 ರನ್ ಗಳಿಸಿದೆ. ಮಂದ ಬೆಳಕಿನ ಕಾರಣ ದಿನದಾಟವನ್ನು ಬೇಗನೇ ನಿಲ್ಲಿಸಲಾಯಿತು.

ಟಾಸ್ ಗೆದ್ದ ಪ್ರವಾಸಿ ತಂಡದ ನಾಯಕ ಏಡನ್ ಮರ್ಕರಮ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಆತಿಥೇಯ ತಂಡ ಆರಂಭದಲ್ಲಿ ಒಂದಿಷ್ಟು ಪರದಾಡಿದರೂ ಗಿಲ್ (92, 137 ಎಸೆತ, 12 ಬೌಂ, 1 ಸಿ) ಮತ್ತು ಕರುಣ್ (ಅಜೇಯ 78, 167 ಎಸೆತ, 10 ಬೌಂ) ಸೊಗಸಾದ ಆಟವಾಡಿ ತಂಡ ಕುಸಿಯದಂತೆ ನೋಡಿಕೊಂಡರು.

ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದ ದಕ್ಷಿಣ ಆಫ್ರಿಕಾ ‘ಎ’ ತಂಡಕ್ಕೆ ಆರಂಭದಲ್ಲೇ ಯಶಸ್ಸು ಲಭಿಸಿತು. ಅಭಿಮನ್ಯು ಈಶ್ವರನ್ (5) ಅವರು ಆರನೇ ಓವರ್ನಲ್ಲಿ ಲುಂಗಿ ಗಿಡಿ ಬೌಲಿಂಗ್ನಲ್ಲಿ ಎಲ್ಬಿ ಬಲೆಯಲ್ಲಿ ಬಿದ್ದರು. ಬಳಿಕ ಬಂದ ಪ್ರಿಯಾಂಕ್ ಪಾಂಚಾಲ್ (6) ಕೂಡಾ ಹೆಚ್ಚುಹೊತ್ತು ನಿಲ್ಲಲಿಲ್ಲ.

ಉತ್ತಮ ಜೊತೆಯಾಟ: ಬೇಗನೇ ಎರಡು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿದ್ದ ತಂಡಕ್ಕೆ ಗಿಲ್ ಮತ್ತು ಕರುಣ್ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ಬಳಿಕ ಎದುರಾಳಿ ತಂಡದ ವೇಗ ಮತ್ತು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಮೂರನೇ ವಿಕೆಟ್ಗೆ 204 ಎಸೆತಗಳಲ್ಲಿ 135 ರನ್ಗಳು ಬಂದವು.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಪಂಜಾಬ್ನ ಬಲಗೈ ಬ್ಯಾಟ್ಸ್ಮನ್ ಗಿಲ್, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆದರೆ ಶತಕ ಗಳಿಸುವ ಅವಕಾಶವನ್ನು ಮತ್ತೆ ಕಳೆದುಕೊಂಡರು. ಲೂಥೊ ಸಿಪಮ್ಲಾ ಎಸೆತದಲ್ಲಿ ‘ಗಲ್ಲಿ’ಯಲ್ಲಿದ್ದ ಮುತ್ತುಸ್ವಾಮಿಗೆ ಕ್ಯಾಚಿತ್ತು ನಿರ್ಗಮಿಸಿದರು. ತಿರುವನಂತಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗಿಲ್ 10 ರನ್ಗಳಿಂದ ಶತಕ ವಂಚಿತರಾಗಿದ್ದರು.

ಗಿಲ್ ನಿರ್ಗಮನದ ನಂತರ ಆಡಲಿಳಿದ ಸಹಾ (ಅಜೇಯ 36, 86 ಎಸೆತ) ಅವರು ಕರುಣ್ಗೆ ತಕ್ಕ ಸಾಥ್ ನೀಡಿದರು. ಮುರಿಯದ ನಾಲ್ಕನೇ ವಿಕೆಟ್ಗೆ 67 ರನ್ ಸೇರಿಸಿರುವ ಇವರು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಭಾರತ ‘ಎ’ ಮೊದಲ ಇನಿಂಗ್ಸ್ 74 ಓವರ್ಗಳಲ್ಲಿ 3 ವಿಕೆಟ್ಗೆ 233 (ಶುಭಮನ್ ಗಿಲ್ 92, ಕರುಣ್ ನಾಯರ್ ಬ್ಯಾಟಿಂಗ್ 78, ವೃದ್ಧಿಮಾನ್ ಸಹಾ ಬ್ಯಾಟಿಂಗ್ 36, ಲುಂಗಿ ಗಿಡಿ 41ಕ್ಕೆ 1, ವಿಯಾನ್ ಮುಲ್ಡೆರ್ 19ಕ್ಕೆ 1, ಲೂಥೊ ಸಿಪಮ್ಲಾ 54ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.