ಬೆಂಗಳೂರು: ಭಾರತ ‘ಎ; ತಂಡವು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ಎದುರು 5 ವಿಕೆಟ್‌ಗಳಿಂದ ಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ‘ಎ’ ತಂಡವು ಮೊಹಮ್ಮದ್ ಸಿರಾಜ್ (88ಕ್ಕೆ4) ಮತ್ತು ಕೃಷ್ಣಪ್ಪ ಗೌತಮ್ (31ಕ್ಕೆ3) ಅವರ ಉತ್ತಮ ಬೌಲಿಂಗ್ ಎದುರು 31.4 ಓವರ್‌ಗಳಲ್ಲಿ 151 ರನ್ ಗಳಿಸಿ ಆಲೌಟ್ ಆಯಿತು.

ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ ‘ಎ’ ತಂಡವು 7 ಓವರ್‌ಗಳಲ್ಲಿ 23 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಜಯ್ ರಿಚರ್ಡ್ಸನ್ (14ಕ್ಕೆ3) ಚುರುಕಿನ ದಾಳಿ ನಡೆಸಿದರು. ಆರ್. ಸಮರ್ಥ್, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕಬಳಿಸಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ನಾಲ್ಕು ರನ್ ಗಳಿಸಿ ಆಷ್ಟನ್ ಅಗರ್ ಎಸೆತದಲ್ಲಿ ಔಟಾದರು.

ನಂತರ ಜೊತೆಗೂಡಿದ ಅಂಬಟಿ ರಾಯುಡು (ಔಟಾಗದೆ 62; 107ಎಸೆತ)ಮತ್ತು ಕೃಣಾಲ್ ಪಾಂಡ್ಯ (49; 66ಎಸೆತ) ಅವರು 5 ವಿಕೆಟ್‌ಗೆ 109 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಗೆಲ್ಲಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ ‘ಎ’: 31.4 ಓವರ್‌ಗಳಲ್ಲಿ1 51 (ಡಾರ್ಚಿ ಶಾರ್ಟ್ 16, ಉಸ್ಮಾನ್ ಖ್ವಾಜಾ 13, ಟ್ರಾವಿಸ್ ಹೆಡ್ 28, ಆಷ್ಟನ್ ಆಗರ್ 34, ನೇಸರ್ 16, ಎಂ.ಜೆ. ಸ್ವಾಪ್ಸನ್ 15, ಮೊಹಮ್ಮದ್ ಸಿರಾಜ್, 88ಕ್ಕೆ4, ದೀಪಕ್ ಚಹಾರ್ 33ಕ್ಕೆ1, ಕೆ. ಗೌತಮ್ 31ಕ್ಕೆ3, ಕೃಣಾಲ್ ಪಾಂಡ್ಯ 3ಕ್ಕೆ1).

ಭಾರತ ‘ಎ’: 38.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 152 (ಸೂರ್ಯಕುಮಾರ್ ಯಾದವ್ 15, ಅಂಬಟಿ ರಾಯುಡು 62, ಕೃಣಾಲ್ ಪಾಂಡ್ಯ 49, ನಿತೀಶ್ ರಾಣಾ 11 ಜಯ್ ರಿಚರ್ಡ್ಸನ್ 27ಕ್ಕೆ3, ಆಷ್ಟನ್ ಅಗರ್ 37ಕ್ಕೆ1, ಡಾರ್ಚಿ ಶಾರ್ಟ್ 3ಕ್ಕೆ1) ಫಲಿತಾಂಶ: ಭಾರತ ಎ ತಂಡಕ್ಕೆ 5 ವಿಕೆಟ್‌ಗಳ ಜಯ ಮತ್ತು ಬೋನಸ್ ಪಾಯಿಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.