ಅಹಮದಾಬಾದ್: ಎಡಗೈ ಬ್ಯಾಟರ್ ರಿಂಕು ಸಿಂಗ್ ಕೊನೆಯ ಓವರ್ನಲ್ಲಿ ಸಿಡಿಸಿದ ಸತತ ಐದು ಸಿಕ್ಸರ್ಗಳ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಭಾನುವಾರ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇ ನೂತನ ದಾಖಲೆ ಸೃಷ್ಟಿಯಾಯಿತು.

205 ರನ್ ಗುರಿ ಬೆನ್ನಟ್ಟಿ ಕೆಕೆಆರ್ಗೆ ಅಂತಿಮ ಓವರ್ನಲ್ಲಿ ಗೆಲುವಿಗೆ 29 ರನ್ ಅಗತ್ಯವಿತ್ತು. ಬಹುತೇಕ ಅಸಾಧ್ಯ ಎಂಬಂತಿದ್ದ ಗುರಿಯನ್ನು ರಿಂಕು, ಸತತ ಐದು ಸಿಕ್ಸರ್ ಸಿಡಿಸಿ ಪವಾಡಸದೃಶ ಜಯಗಳಿಸಲು ನೆರವಾದರು.

ಮಧ್ಯಮ ವೇಗಿ ಯಶ್ ದಯಾಳ್ 20ನೇ ಓವರ್ನ ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಸಿಂಗಲ್ ಗಳಿಸಿದರು. ಬಳಿಕ ಸ್ಟ್ರೈಕ್ಗೆ ಬಂದ ರಿಂಕು, ಅಸಾಧ್ಯ ಸವಾಲನ್ನು ಸಾಧ್ಯ ಮಾಡಿದರು.

ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಾಧನೆ:
ರಿಂಕು ಸಿಂಗ್ ಸೇರಿದಂತೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ ನಾಲ್ಕು ಮಂದಿ ಬ್ಯಾಟರ್ಗಳು ಒಂದೇ ಓವರ್ನಲ್ಲಿ ಐದು ಸಿಕ್ಸರ್ಗಳ ಸಾಧನೆ ಮಾಡಿದ್ದಾರೆ.

1. ಕ್ರಿಸ್ ಗೇಲ್ (2012, ಬೌಲರ್: ರಾಹುಲ್ ಶರ್ಮಾ)
2. ರಾಹುಲ್ ತೆವಾಟಿಯಾ (2020, ಬೌಲರ್: ಶೆಲ್ಡನ್ ಕಾಟ್ರೆಲ್)
3. ರವೀಂದ್ರ ಜಡೇಜ (2021, ಬೌಲರ್: ಹರ್ಷಲ್ ಪಟೇಲ್)
4. ರಿಂಕು ಸಿಂಗ್ (2023, ಬೌಲರ್: ಯಶ್ ದಯಾಳ್)

ಕೊನೆಯ ಓವರ್ನಲ್ಲಿ ಗರಿಷ್ಠ ರನ್ ಚೇಸ್:
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಗೆಲುವಿಗೆ ಅಂತಿಮ ಓವರ್ನಲ್ಲಿ 29 ರನ್ಗಳ ಅಗತ್ಯವಿತ್ತು. ಅಲ್ಲದೆ ರಿಂಕು ಸಿಂಗ್ ಬಲದಿಂದ ಕೆಕೆಆರ್ ತಂಡವು 31 ರನ್ ಗಳಿಸಿ ಗೆಲುವು ಬಾರಿಸಿತು.

ಇದು ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಕೊನೆಯ ಓವರ್ ಗೆಲುವಿನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್ ದಾಖಲೆಯಾಗಿದೆ. 2016ರಲ್ಲಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 23 ರನ್ ಗಳಿಸಿರುವುದು ಐಪಿಎಲ್ನಲ್ಲಿ ಕೊನೆಯ ಓವರ್ ಚೇಸಿಂಗ್ನಲ್ಲಿ ಈ ವರೆಗಿನ ದಾಖಲೆಯಾಗಿತ್ತು.

ಈ ಮೂಲಕ ಧೋನಿ ಸಾಧನೆಯನ್ನು ರಿಂಕು ಮೀರಿಸಿದ್ದಾರೆ.

*ಯಶ್ ದಯಾಳ್ ನಾಲ್ಕು ಓವರ್ಗಳಲ್ಲಿ 69 ರನ್ ಬಿಟ್ಟುಕೊಟ್ಟರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಎರಡನೇ ದುಬಾರಿ ಬೌಲರ್ ಎನಿಸಿದರು. 2018ರಲ್ಲಿ ಬಾಸಿಲ್ ತಂಪಿ 70 ರನ್ ಬಿಟ್ಟುಕೊಟ್ಟಿದ್ದರು.

*ಇದೇ ಪಂದ್ಯದಲ್ಲಿ ಸ್ಪಿನ್ನರ್ ರಶೀದ್ ಖಾನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ನಾಲ್ಕನೇ ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.