ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CSK‌vPBKS & KKRvLSG Highlights| ಅಗ್ರಸ್ಥಾನಕ್ಕೆ ಕೆಕೆಆರ್, 3ರಲ್ಲಿ ಸಿಎಸ್‌ಕೆ

Published 6 ಮೇ 2024, 5:03 IST
Last Updated 6 ಮೇ 2024, 5:03 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಚೆನ್ನೈ ಗೆಲುವು ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ ಲಖನೌ ವಿರುದ್ಧ ಕೋಲ್ಕತ್ತ ತಂಡವು ಗೆಲುವಿನ ನಗೆ ಬೀರಿದೆ.

ಹಿಮಾಚಲ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರವೀಂದ್ರ ಜಡೇಜ ಅವರ ಆಲ್‌ರೌಂಡ್ ಆಟದ ನೆರವಿನಿಂದ 28 ರನ್‌ಗಳ ಅಂತರದಿಂದ ಆತಿಥೇಯ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಮತ್ತೊಂದು ಪಂದ್ಯದಲ್ಲಿ ಸುನಿಲ್ ನಾರಾಯಣ ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್, ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕೋಲ್ಕತ್ತ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ 98 ರನ್‌ಗಳ ಗೆಲುವು ದಾಖಲಿಸಿತು.

11 ಪಂದ್ಯಗಳನ್ನು ಆಡಿರುವ ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ಎಂಟರಲ್ಲಿ ಗೆದ್ದು 16 ಅಂಕದೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಪಂದ್ಯಗಳಲ್ಲಿ 12 ಪಾಯಿಂಟ್ಸ್‌ ಸಂಪಾದಿಸಿರುವ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡವು ನಾಲ್ಕರಿಂದ ಐದನೇ ಸ್ಥಾನಕ್ಕೆ ಕುಸಿದಿದೆ.

ಐಪಿಎಲ್‌ನಲ್ಲಿ ಲಖನೌ ತಂಡವು ಈವರೆಗೆ ಕಂಡ ಅತಿ ಹೆಚ್ಚು ಅಂತರದ ಸೋಲು ಇದಾಗಿದೆ.

* 2024ರಲ್ಲಿ ಕೆಕೆಆರ್ ವಿರುದ್ಧ 98 ರನ್‌ ಸೋಲು

* 2023ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 81 ರನ್ ಸೋಲು

* 2023ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 62 ರನ್ ಸೋಲು

* 2022ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 62 ರನ್ ಸೋಲು

ಮತ್ತೊಂದು ಪಂದ್ಯದಲ್ಲಿ ಪಂಜಾಬ್ ಎದುರು ರವೀಂದ್ರ ಜಡೇಜ ಹೊಸ ದಾಖಲೆ ಮಾಡಿದ್ದಾರೆ. ಪಂದ್ಯವೊಂದರಲ್ಲಿ 40ಕ್ಕೂ ಹೆಚ್ಚು ರನ್‌ ಹಾಗೂ 3 ವಿಕೆಟ್‌ ಸಾಧನೆ ಮಾಡಿದ ಮೂರನೇ ಆಟಗಾರರೆಸಿದ್ದಾರೆ.

ಪಂದ್ಯವೊಂದರಲ್ಲಿ 40ಕ್ಕೂ ಹೆಚ್ಚು ರನ್‌ ಹಾಗೂ 3 ವಿಕೆಟ್‌ ಸಾಧನೆ

3 - ಶೇನ್ ವ್ಯಾಟ್ಸನ್

3 - ಯುವರಾಜ್ ಸಿಂಗ್

3 - ರವೀಂದ್ರ ಜಡೇಜ

2 - ಆ್ಯಂಡ್ರೆ ರಸೆಲ್

ಪಂದ್ಯಯೊಂದರಲ್ಲಿ ಇಬ್ಬರೂ ವಿಕೆಟ್‌ ಕೀಪರ್‌ಗಳು ಗೋಲ್ಡನ್ ಡಕ್‌ ಆಗಿದ್ದಾರೆ. ಸಿಎಸ್‌ಕೆ ಪರ ಎಂ.ಎಸ್‌.ಧೋನಿ ಹಾಗೂ ಪಂಜಾಬ್ ಪರ ಜಿತೇಶ್ ಶರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಈ ಹಿಂದೆ 2010ರಲ್ಲಿ ರಾಜಸ್ಥಾನ್ ರಾಯಲ್ಸ್‌ ಮತ್ತು ಮುಂಬೈ ಇಂಡಿಯನ್ಸ್

2012ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌

2018ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್

2023ರಲ್ಲಿ ಗುಜರಾತ್ ಟೈಟನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯಗಳಲ್ಲಿ ಉಭಯ ತಂಡಗಳ ವಿಕೆಟ್‌ ಕೀಪರ್‌ಗಳು ಡಕ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT