ಚೆನ್ನೈ : ಆಟದ ಎಲ್ಲ ವಿಭಾಗಗಳಲ್ಲೂ ಪ್ರಾಬಲ್ಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ 63 ರನ್‌ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿತು.

ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಚೆನ್ನೈ ತಂಡವು ಆರಂಭಿಕ ಆಟಗಾರ ರಚಿನ್ ರವೀಂದ್ರ (46;20ಎ, 4x6, 6x3) ಮತ್ತು ಅಂತಿಮ ಹಂತದಲ್ಲಿ ಶಿವಂ ದುಬೆ (51;23ಎ, 4x2, 6x5) ಅವರ ಮಿಂಚಿನ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 206 ರನ್ ಕಲೆಹಾಕಿತು.

ಈ ಭಾರಿ ಮೊತ್ತಕ್ಕೆ ಉತ್ತರವಾಗಿ ಗುಜರಾತ್ ಟೈಟನ್ಸ್ ತಂಡ ಆರಂಭದಲ್ಲೇ ನಾಯಕ ಶುಮಮನ್ ಗಿಲ್ (8 ರನ್) ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳದೆ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.

ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಸಾಯಿ ಸುದರ್ಶನ್ (37; 31ಎ) ಈ ಪಂದ್ಯದಲ್ಲಿ ಟೈಟನ್ಸ್ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರಿಗೆ ಉಳಿದ ಆಟಗಾರರಿಂದ ಬೆಂಬಲ ಸಿಗಲಿಲ್ಲ. ಚೆನ್ನೈ ಪರ ದೀಪಕ್ ಚಾಹರ್, ಮುಸ್ತಫಿಜುರ್ ರೆಹಮಾನ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು ಚೆನ್ನೈ ತಂಡಕ್ಕೆ ಆರಂಭಿಕ ಆಟಗಾರರಾದ ರಚಿನ್ ಮತ್ತು ನಾಯಕ ಋತುರಾಜ್ ಗಾಯಕವಾಡ್ (46;36ಎ, 4x5, 6x1) ಉತ್ತಮ ಆರಂಭ ಒದಗಿಸಿದರು. ಪವರ್ ಪ್ಲೇ ಅವಧಿಯನ್ನು ಸದುಪಯೋಗ ಪಡೆದುಕೊಂಡ ಈ ಜೋಡಿ ಮೊದಲ ವಿಕೆಟ್‌ಗೆ 62 ರನ್ ಸೇರಿಸಿತು. ರವೀಂದ್ರ ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸಿ ಸಿಎಸ್‌ಕೆ ಅಭಿಮಾನಿಗಳನ್ನು ರಂಜಿಸಿದರು. ಕೊನೆಗೂ ಸ್ಪಿನ್ನರ್ ರಶೀದ್ ಖಾನ್ ಈ ಜೊತೆಯಾಟ ಮುರಿದರು. ಹೊಡೆತಕ್ಕೆ ಮುನ್ನುಗ್ಗಿ ನಿಯಂತ್ರಣ ಕಳೆದುಕೊಂಡಾಗ ವೃದ್ಧಿಮಾನ್ ಸಹ ಸ್ಟಂಪಿಂಗ್‌ನಲ್ಲಿ ತಪ್ಪು ಮಾಡಲಿಲ್ಲ. ಅಜಿಂಕ್ಯ ರಹಾನೆ ಕೂಡ ಸಾಯಿ ಕಿಶೋರ್ ಬೌಲಿಂಗ್‌ನಲ್ಲಿ ಮುನ್ನುಗ್ಗಿ ದೊಡ್ಡ ಹೊಡೆತಕ್ಕೆ ಹೋಗಿ ಸ್ಟಂಪಿಂಗ್‌ಗೆ ಒಳಗಾದರು.

₹7.60 ಕೋಟಿಗೆ ಚೆನ್ನೈ ಪಾಲಾಗಿದ್ದ ಸಮೀರ್ ರಿಜ್ವಿ ಪದಾರ್ಪಣೆ ಮಾಡಿ 14 ರನ್ ಗಳಿಸಿದರು. ರಶೀದ್ ಖಾನ್ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಎತ್ತಿ ಗಮನಸೆಳೆದರು.

ರವೀಂದ್ರ ಅವರ ವೇಗಕ್ಕೆ ಸಾಟಿಯಾಗದಿದ್ದರೂ ಗಾಯಕವಾಡ ಗುಣಮಟ್ಟದಿಂದ ಕೂಡಿತ್ತು. ಜಾನ್ಸನ್ ಎಸೆತವನ್ನು ಪುಲ್ ಮಾಡಲು ಹೋಗಿ ಅವರು ವಿಕೆಟ್ ಕೀಪರ್‌ಗೆ ಕ್ಯಾಚಿತ್ತರು. ನಂತರ ದುಬೆ ಅವರದೇ ಆಟವಾಗಿತ್ತು. ಸಾಯಿಕಿಶೋರ್ ಬೌಲಿಂಗ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಬಾರಿಸಿದರೆ, ಸ್ಪೆನ್ಸರ್ ಜಾನ್ಸನ್ ಬೌಲಿಂಗ್‌ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು.

ಡೇರಿಲ್ ಮಿಚೆಲ್ (ಅಜೇಯ 24, 20ಎ) ಅವರೊಂದಿಗೆ ದುಬೆ ನಾಲ್ಕನೇ ವಿಕೆಟ್‌ಗೆ 35 ಎಸೆತಗಳಲ್ಲಿ 57 ರನ್ ಜೊತೆಯಾಟವಾಡಿದರು.

ಹಾಲಿ ಚಾಂಪಿಯನ್ ಚೆನ್ನೈ ತಂಡಕ್ಕೆ ಇದು ತವರಿನಲ್ಲಿ ಸತತ ಎರಡನೇ ಗೆಲುವು. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ರೋಚಕ ಜಯ ಗಳಿಸಿದ್ದ ಟೈಟನ್ಸ್ ತಂಡವು ಈ ಸೋಲಿನೊಂದಿಗೆ ಆರನೇ ಸ್ಥಾನಕ್ಕೆ ಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.