ಕೋಲ್ಕತ್ತ: ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆ ಇಟ್ಟು ಮುನ್ನಡೆಯುತ್ತಿದೆ.

ಈಡನ್ ಗಾರ್ಡನ್‌ನಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬೌಲಿಂಗ್ ದೌರ್ಬಲ್ಯವನ್ನು ಬಳಸಿಕೊಂಡು ಜಯಿಸುವ ಛಲದಲ್ಲಿದೆ. ಅದರೊಂದಿಗೆ ಐದನೇ ಸ್ಥಾನದಲ್ಲಿರುವ ಡೆಲ್ಲಿ ತಂಡವು ಅಗ್ರ ನಾಲ್ಕರಲ್ಲಿ ಒಂದಾಗುವತ್ತ ಚಿತ್ತ ನೆಟ್ಟಿದೆ. ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಿದ್ದಾಗ ಕೋಲ್ಕತ್ತ ಎದುರು ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲೂ ಪಂತ್ ಬಳಗ ಸಿದ್ಧವಾಗಿದೆ.

ಡೆಲ್ಲಿ ತಂಡವು ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಐದು ಜಯಿಸಿ, ಉಳಿದಿದ್ದರಲ್ಲಿ ಸೋತಿದೆ. ಕೋಲ್ಕತ್ತ ತಂಡವು ಎಂಟು ಪಂದ್ಯಗಳಲ್ಲಿ ಆಡಿದೆ. ಆ ಪೈಕಿ ಐದು ಜಯಿಸಿ, ಮೂರರಲ್ಲಿ ಸೋತಿದೆ. ಇದರೊಂದಿಗೆ ಉತ್ತಮ ರನ್ ರೇಟ್ ಸಹ ಇರುವುದರಿಂದ ಎರಡನೇ ಸ್ಥಾನದಲ್ಲಿದೆ.

ಆದರೆ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 261 ರನ್‌ಗಳ ಗುರಿ ನೀಡಿದ್ದ ಕೋಲ್ಕತ್ತ ಸೋತಿತು. ಅದಕ್ಕೆ ಕಾರಣವಾಗಿದ್ದು ಬೌಲರ್‌ಗಳ ವೈಫಲ್ಯ. ಏಳು ಬೌಲರ್‌ಗಳ ದಾಳಿಯಲ್ಲಿ ತಂಡಕ್ಕೆ ಸಿಕ್ಕಿದ್ದು ಎರಡು ವಿಕೆಟ್ ಮಾತ್ರ. ಅದರಲ್ಲೂ ಒಂದು ರನ್‌ಔಟ್ ಇತ್ತು.

ತಂಡದಲ್ಲಿ ಅನುಭವಿ ಬೌಲರ್‌ಗಳ ಕೊರತೆ ಎದ್ದುಕಾಣುತ್ತಿದೆ. ಸುನಿಲ್ ನಾರಾಯಣ, ವರುಣ ಚಕ್ರವರ್ತಿ ಅವರು ಸ್ಪಿನ್ ವಿಭಾಗದಲ್ಲಿ ಉತ್ತಮವಾಗಿದ್ದಾರೆ. ಆದರೆ ವೇಗದ ವಿಭಾಗ ತುಸು ದುರ್ಬಲವಾಗಿದೆ.

ಡೆಲ್ಲಿ ತಂಡದ ಯುವ ಬ್ಯಾಟರ್ ಜೇಕ್ ಫ್ರೆಸರ್ ಮೆಕ್‌ಗರ್ಕ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್, ರಿಷಭ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಕಟ್ಟಿಹಾಕಲು ಕೋಲ್ಕತ್ತ ಬೌಲರ್‌ಗಳು ವಿಭಿನ್ನ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಬೇಕಿದೆ.

ಆದರೆ ಡೆಲ್ಲಿ ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಖಲೀಲ್ ಅಹಮದ್, ಇಶಾಂಗ್ ಶರ್ಮಾ, ರಸಿಕ್ ಧಾರ್ ಸಲಾಮ್, ಸ್ಪಿನ್ನರ್ ಕುಲದೀಪ್ ಯಾದವ್ ಅವರು ಕೋಲ್ಕತ್ತ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಎದುರಿಸಲಿದೆ. ಆತಿಥೇಯ ಬಳಗದ ಫಿಲ್ ಸಾಲ್ಟ್, ಸುನಿಲ್ ನಾರಾಯಣ್, ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್, ಶ್ರೇಯಸ್ ಅಯ್ಯರ್, ರಿಂಕುಸಿಂಗ್, ಅಂಗಕ್ರಿಷ್ ರಘುವಂಶಿ ಹಾಗೂ ರಮಣದೀಪ್ ಸಿಂಗ್ ಅವರು ಉತ್ತಮ ಲಯದಲ್ಲಿದ್ದಾರೆ.

ಸುನಿಲ್ ಈಗಾಗಲೇ ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಒಟ್ಟು 357 ರನ್‌ಗಳನ್ನು ಗಳಿಸಿದ್ದಾರೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಳ್ಳಲು ಕೋಲ್ಕತ್ತ ತಂಡವು ತನ್ನ ಬ್ಯಾಟಿಂಗ್ ಬಲವನ್ನೇ ಹೆಚ್ಚು ನೆಚ್ಚಿಕೊಂಡಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.