ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಮಧ್ಯಮವೇಗಿ ಜೂಲನ್ ಗೋಸ್ವಾಮಿ ಅವರನ್ನು ಮಹಿಳಾ ಕೆರೀಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಯಲ್ಲಿ ಆಡುವ ಟ್ರಿಂಬಾಗೊ ನೈಟ್ರೈಡರ್ಸ್(ಟಿಕೆಆರ್) ತಂಡದ ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ.

20 ವರ್ಷಗಳವರೆಗೆ ಅವರು ಭಾರತ ತಂಡದಲ್ಲಿ ಎಲ್ಲ ಮಾದರಿಗಳಲ್ಲಿಯೂ ಆಡಿದ್ದರು. ಒಟ್ಟು 355 ವಿಕೆಟ್ಗಳನ್ನು ಗಳಿಸಿದ್ದಾರೆ.

‘ಒಂದು ಪ್ರತಿಷ್ಠಿತ ಫ್ರ್ಯಾಂಚೈಸಿಯಲ್ಲಿ ಸ್ಥಾನ ಪಡೆದಿರುವುದು ದೊಡ್ಡ ಗೌರವ. ನೈಟ್ ರೈಡರ್ಸ್ ತಂಡವು ವಿಶ್ವದ ಬೇರೆ ಬೇರೆ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದೆ’ ಎಂದು ಜೂಲನ್ ಹೇಳಿದ್ದಾರೆ.

‘ಜೂಲನ್ ಅವರು ಮಹಿಳಾ ಕ್ರಿಕೆಟ್ ಕ್ಷೇತ್ರದ ದಂತಕಥೆಯಾಗಿದ್ದಾರೆ. ಅವರನ್ನು ನಮ್ಮ ತಂಡಕ್ಕೆ ಮೆಂಟರ್ ಆಗಿ ನೇಮಕ ಮಾಡಿಕೊಳ್ಳುತ್ತಿರುವುದು ಹೆಮ್ಮೆ ಮತ್ತು ಸಂತಸ ತಂದಿದೆ. ಟಿಕೆಆರ್ ತಂಡವು ಅತ್ಯಂತ ಪ್ರತಿಷ್ಠಿತವಾಗಿದ್ದು ಮತ್ತಷ್ಟು ಉತ್ತಮ ಸಾಧನೆಗಳನ್ನು ಜೂಲನ್ ಮಾರ್ಗದರ್ಶನದಲ್ಲಿ ಮಾಡಲಿದೆ’ ಎಂದು ನೈಟ್ರೈಡರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.