ಸಾಮಾಜಿಕ ಮಾಧ್ಯಮಗಳಲ್ಲಿನ ಟ್ರೋಲ್‌ಗಳು ಒಬ್ಬ ಆಟಗಾರನ ಮಾನಸಿಕ ಪರಿಸ್ಥಿತಿಯ ಮೇಲೆ ಯಾವ ರೀತಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ಕುರಿತು ಇದೇ ಮೊದಲ ಬಾರಿಗೆ ಕ್ರಿಕೆಟಿಗ, ಕನ್ನಡಿಗ ಕೆ.ಎಲ್ ರಾಹುಲ್ ಮನಬಿಚ್ಚಿ ಮಾತನಾಡಿದ್ದಾರೆ.

ಜನಪ್ರಿಯ ಟಾಕ್ ಶೋವೊಂದರಲ್ಲಿ ಭಾಗವಹಿಸಿದ್ದ ಕೆ.ಎಲ್. ರಾಹುಲ್ ತಮ್ಮ ಕ್ರಿಕೆಟ್ ಜೀವನದ ಏಳು–ಬೀಳು, ಟ್ರೋಲ್‌ನಿಂದಾದ ಖಿನ್ನತೆ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳು ಒಬ್ಬ ಕ್ರೀಡಾಪಟುವಿನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುವುದರ ಬಗ್ಗೆ ರಾಹುಲ್ ವಿವರವಾಗಿ ತಿಳಿಸಿದ್ದಾರೆ.

‘ಹೌದು.. ಟ್ರೋಲ್‌ಗಳು ನನ್ನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ನನಗೆ ಮಾತ್ರವಲ್ಲ ಟ್ರೋಲ್‌ಗೆ ಒಳಗಾದ ಎಲ್ಲ ಕ್ರೀಡಾಪಟುಗಳ ಸ್ಥಿತಿಯೂ ಇದೇ ಆಗಿದೆ. ಕೆಲವೊಂದು ಕಷ್ಟಕರ ಸನ್ನಿವೇಶದಲ್ಲಿ ನಮಗೆ ಜನರ ಬೆಂಬಲ ಬೇಕಿರುತ್ತದೆ. ಆದರೆ, ಅಂತಹ ಸಮಯದಲ್ಲಿಯೇ ನಾವು ಟ್ರೋಲ್‌ಗೆ ಒಳಗಾಗುತ್ತೇವೆ. ನಾವು ಏನು ಬೇಕಾದರೂ ಕಾಮೆಂಟ್ ಮಾಡಬಹುದು ಎಂದು ಜನರು ಭಾವಿಸುತ್ತಾರೆ. ಆದರೆ, ಟ್ರೋಲ್ ಆದ ವ್ಯಕ್ತಿಯ ಜೀವನದಲ್ಲಿ ಏನಾಗುತ್ತಿದೆ ಎಂದು ನೋಡುವುದಿಲ್ಲ‘ ಎಂದು ವಿಷಾದ ವ್ಯಕ್ತಪಡಿಸಿದರು.

‘ಯಾವ ಆಟಗಾರನೂ ಕಳಪೆ ಪ್ರದರ್ಶನ ನೀಡಬೇಕೆಂದು ಬಯಸುವುದಿಲ್ಲ. ಉತ್ತಮ ಪ್ರದರ್ಶನ ಕೊಡಬೇಕೆಂದು ಪ್ರತಿಯೊಬ್ಬನೂ ಪ್ರತಿದಿನ ಕಷ್ಟಪಡುತ್ತಾನೆ. ಕೆಲವೊಮ್ಮೆ ನಾವು ಅಂದುಕೊಂಡ ಹಾಗೆ ಪ್ರದರ್ಶನ ಕೊಡಲು ಸಾಧ್ಯವಾಗುವುದಿಲ್ಲ. ಆಗ ನಾವು ಟ್ರೋಲ್ ಆಗುತ್ತೇವೆ. ಇದೇ ನಮ್ಮ ಜೀವನ. ಕ್ರಿಕೆಟ್ ಬಿಟ್ಟು ಇನ್ಯಾವುದೇ ವಿಷಯ ನನಗೆ ತಿಳಿದಿಲ್ಲ‘ ಎಂದು ರಾಹುಲ್ ಭಾವುಕರಾದರು.

‘ಕಳಪೆ ಪ‍್ರದರ್ಶನ ಕೊಟ್ಟ ತಕ್ಷಣ ನಾನು ಆಟವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಕೆಲವರು ಹೇಳುತ್ತಾರೆ. ಅವರು ನನ್ನ ಬಗ್ಗೆ ಹಾಗೆ ಅಭಿಪ್ರಾಯಪಡಲು ಹೇಗೆ ಸಾಧ್ಯ? ಎನ್ನುವುದೇ ನನಗೆ ಆಶ್ಚರ್ಯ. ಉತ್ತಮ ಪ್ರದರ್ಶನ ನೀಡಬೇಕೆಂದು ನಾನು ಪ್ರತಿದಿನ ಕಷ್ಟಪಡುತ್ತೇನೆ. ಆದರೆ ಕೆಲವೊಮ್ಮೆ ಅದಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.