ನಾರ್ತ್ ಸೌಂಡ್, ಆಂಟಿಗಾ (ಪಿಟಿಐ): ಭಾರತ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಹಿರಿಯ ಆಟಗಾರರಾದ ಬ್ರಯಾನ್ ಲಾರಾ ಮತ್ತು ರಾಮ್ನರೇಶ್ ಸರವಣ್ ಬ್ಯಾಟಿಂಗ್ ಪಾಠ ಮಾಡುವರು. ಆಂಟಿಗಾದಲ್ಲಿ ನಡೆಯಲಿರುವ ತರಬೇತಿಯಲ್ಲಿ ಇವರಿಬ್ಬರು ತಂಡದ ಬ್ಯಾಟ್ಸ್ಮನ್ಗಳ ಲೋಪಗಳನ್ನು ಗುರುತಿಸಿ ಸಲಹೆ ನೀಡಲಿದ್ದಾರೆ.

ಮೊದಲ ಟೆಸ್ಟ್ ಇಲ್ಲಿನ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಆಗಸ್ಟ್ 22ರಂದು ಆರಂಭವಾಗಲಿದೆ. ಎರಡನೇ ಪಂದ್ಯ ಆಗಸ್ಟ್ 30ರಿಂದ ಜಮೈಕಾದ ಸಬೀನಾ ಪಾರ್ಕ್ನಲ್ಲಿ ನಡೆಯಲಿದೆ.

‘ಚೆನ್ನಾಗಿ ಆಡಬಲ್ಲ ಯುವ ಬ್ಯಾಟ್ಸ್ಮನ್ಗಳು ತಂಡದಲ್ಲಿದ್ದಾರೆ. ಅವರ ಮೇಲೆ ವೆಸ್ಟ್ ಇಂಡೀಸ್ನ ಕ್ರಿಕೆಟ್ ಪ್ರೇಮಿಗಳು ಭರವಸೆ ಇರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಈ ವರ್ಷದ ಆರಂಭದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಈ ಆಟಗಾರರು ಸಾಮರ್ಥ್ಯ ಮೆರೆದಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಲಭಿಸಿದರೆ ಬೆಳೆಯುವ ವಿಶ್ವಾಸವಿದೆ’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ನ ನಿರ್ದೇಶಕ ಜಿಮ್ಮಿ ಆ್ಯಡಮ್ಸ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.