ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಮತ್ತು ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಮರಳಿದ್ದಾರೆ.

ಸಿ ಗುಂಪು ಹಂತದ ಪಂದ್ಯದಲ್ಲಿ ಪಾಂಡೆ ಕಣಕ್ಕಿಳಿದಿರಲಿಲ್ಲ. ಗೌತಮ್ ಅವರು ಇಂಗ್ಲೆಂಡ್ ಎದುರು ಸರಣಿ ಆಡುತ್ತಿರುವ ಭಾರತ ತಂಡದಲ್ಲಿ ನೆಟ್ಸ್ ಅಭ್ಯಾಸದ ಬೌಲರ್ ಆಗಿ ತೆರಳಿದ್ದರು.

’ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಗೌತಮ್ ಅವರಿಗೆ ಕರ್ನಾಟಕ ತಂಡಕ್ಕೆ ಮರಳಲು ಅನುಮತಿ ನೀಡಿದೆ. ಮನೀಷ್ ಪಾಂಡೆ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು ಫಿಟ್ ಆಗಿದ್ದಾರೆ. ಆದ್ದರಿಂದ ಆಯ್ಕೆ ಸಮಿತಿಯು ಅವರಿಬ್ಬರನ್ನೂ ಪರಿಗಣಿಸಿದೆ‘ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಡೇಗಾ ನಿಶ್ಚಲ್ ಮತ್ತು ಶುಭಾಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.