ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಶ್ರೀಲಂಕಾ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ.

ನ್ಯೂಜಿಲೆಂಡ್‌ನ ವೇಗಿ ಶೇನ್ ಬಾಂಡ್ ಅವರಿಂದ ತೆರವಾದ ಸ್ಥಾನಕ್ಕೆ 40 ವರ್ಷದ ಮಾಲಿಂಗ ಅವರ ನೇಮಕ ನಡೆದಿದೆ. ಮಾಲಿಂಗ ಅವರು 2008 ರ ಬಳಿಕ ಆಟಗಾರ ಮತ್ತು ಮೆಂಟರ್ ಆಗಿ 13 ವರ್ಷ ಮುಂಬೈ ಇಂಡಿಯನ್ಸ್ ತಂಡದ ಜತೆಗಿದ್ದರು. ಕಳೆದ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಜತೆಗಿದ್ದರು.

ಇದೀಗ ಅವರು ಮಾರ್ಕ್ ಬೌಷರ್ (ಮುಖ್ಯ ಕೋಚ್) ಮತ್ತು ಕೀರನ್ ಪೊಲಾರ್ಡ್ (ಬ್ಯಾಟಿಂಗ್ ಕೋಚ್) ಅವರೊಂದಿಗೆ ಮುಂಬೈ ಇಂಡಿಯನ್ಸ್ ಕೋಚಿಂಗ್ ತಂಡವನ್ನು ಸೇರಿಕೊಂಡಿದ್ದಾರೆ.

ಶೇನ್ ಬಾಂಡ್ 2015 ರಿಂದ ಕಳೆದ ಋತುವಿನವರೆಗೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ತಂಡ ನಾಲ್ಕು ಸಲ ಚಾಂಪಿಯನ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.