ಅನುಭವಿಗಳು ಲಘುಬಗೆಯಲ್ಲಿ ಪೆವಿಲಿಯನ್ ಸೇರಿಕೊಂಡಾಗ ಒಂದಿಷ್ಟೂ ಅಂಜದೆ ಛಲದಿಂದ ಹೋರಾಡಿ ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭರವಸೆಯ ತಾರೆಗಳಾಗಿಯೂ ಗೋಚರಿಸಿದ್ದಾರೆ.

ವಿಶ್ವಕಪ್ ಮಹಾ ಸಮರ ಮುಗಿದಿದೆ. ಟ್ರೋಫಿಗೆ ಮುತ್ತಿಕ್ಕುವ ಕನಸಿನೊಂದಿಗೆ ಇಂಗ್ಲೆಂಡ್ ಮತ್ತು ವೇಲ್ಸ್‌ಗೆ ಕಾಲಿಟ್ಟಿದ್ದ ಹತ್ತು ತಂಡಗಳ ಪೈಕಿ ಆರು ತಂಡಗಳು ಲೀಗ್ ಹಂತದಲ್ಲೇ ಹೊರಬಿದ್ದರೆ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೆನಿಸಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕರ ಘಟ್ಟದಲ್ಲಿ ಮುಗ್ಗಿರಿಸಿದವು. ಭಾರತದ ಸೋಲು ಅರಗಿಸಿಕೊಳ್ಳಲಾಗದಂತಹದ್ದು.

ಮಹೇಂದ್ರ ಸಿಂಗ್ ಧೋನಿ, ಇಮ್ರಾನ್ ತಾಹೀರ್, ಜೆ.ಪಿ.ಡುಮಿನಿ, ಶೋಯಬ್ ಮಲಿಕ್, ಕ್ರಿಸ್ ಗೇಲ್ ಅವರು ವಿಶ್ವ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಈ ದಿಗ್ಗಜರು ವಿಶ್ವಕಪ್‌ಗೆ ನೋವಿನ ವಿದಾಯ ಹೇಳಿದರು. ಈ ಟೂರ್ನಿಯೊಂದಿಗೆ ತಾಹೀರ್ ಮತ್ತು ಡುಮಿನಿ ಅವರ ಕ್ರಿಕೆಟ್ ಬದುಕು ಅಂತ್ಯವಾಯಿತು. ಗೇಲ್ ಕೂಡ ಈಗಾಗಲೇ ನಿವೃತ್ತಿ ಪ್ರಕಟಿಸಿಯಾಗಿದೆ. ಧೋನಿ ಅವರೂ ಇದೇ ಹಾದಿ ತುಳಿಯುವ ಸಾಧ್ಯತೆ ಇದೆ.

ಈ ಸಾಧಕರು ತೆರೆಗೆ ಸರಿದ ಬಳಿಕ ಆಯಾ ತಂಡಗಳಲ್ಲಿ ಇವರ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆಗೆ ಈ ಸಲದ ವಿಶ್ವಕಪ್‌ನಲ್ಲಿ ಉತ್ತರ ದೊರೆತಿದೆ. ಇದೇ ಮೊದಲ ಸಲ ವಿಶ್ವಕಪ್ ಹಬ್ಬದಲ್ಲಿ ಪಾಲ್ಗೊಂಡವರ ಪೈಕಿ ಅನೇಕರು ಆಂಗ್ಲರ ನಾಡಿನಲ್ಲಿ ಪ್ರಜ್ವಲಿಸಿದ್ದಾರೆ. ಅನುಭವಿಗಳು ಲಘುಬಗೆಯಲ್ಲಿ ಪೆವಿಲಿಯನ್ ಸೇರಿಕೊಂಡಾಗ ಒಂದಿಷ್ಟೂ ಅಂಜದೆ ಛಲದಿಂದ ಹೋರಾಡಿ ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭರವಸೆಯ ತಾರೆಗಳಾಗಿಯೂ ಗೋಚರಿಸಿದ್ದಾರೆ.

1.ರಿಷಭ್ ಪಂತ್

ವಯಸ್ಸು: 21

ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಿದ ದಿನದಿಂದಲೂ ಸುದ್ದಿಯಲ್ಲಿದ್ದ ಆಟಗಾರ ರಿಷಭ್ ಪಂತ್. ದೆಹಲಿಯ ಈ ವಿಕೆಟ್ ಕೀಪರ್‌ಗೆ ತಂಡದಲ್ಲಿ ಸ್ಥಾನ ನೀಡದಿದ್ದದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಹಿರಿಯ ಆಟಗಾರರು ಆಯ್ಕೆ ಸಮಿತಿಯ ಮೇಲೆ ಕೆಂಡಕಾರಿದ್ದರು. ವಿಜಯ ಶಂಕರ್ ಗಾಯಗೊಂಡಿದ್ದು ಪಂತ್‌ಗೆ ವರವಾಯಿತು!

ಬದಲಿ ಆಟಗಾರನಾಗಿ ತಂಡ ಸೇರಿಕೊಂಡ ಪಂತ್‌ಗೆ ವಿಶ್ವಕಪ್‌ಗೆ ಪದಾರ್ಪಣೆ ಮಾಡುವ ಅದೃಷ್ಟವೂ ಒಲಿಯಿತು. ಆಡುವ ಬಳಗದಲ್ಲಿ ಸ್ಥಾನ ಪಡೆದ ಖುಷಿಯಲ್ಲಿ ಅವರು ಮೈಮರೆಯಲಿಲ್ಲ. ತಂಡವು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕೆಚ್ಚೆದೆಯಿಂದ ಹೋರಾಡಿ ಆಡಳಿತ ಮಂಡಳಿ ಇಟ್ಟ ನಂಬಿಕೆ ಉಳಿಸಿಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ತಾನು ಸಮರ್ಥ ಎಂಬುದನ್ನೂ ನಿರೂಪಿಸಿದರು. ಧೋನಿ ಜಾಗ ತುಂಬಬಲ್ಲ ಸಾಮರ್ಥ್ಯ ತನಗಿದೆ ಎಂಬ ಸಂದೇಶವನ್ನೂ ಅವರು ರವಾನಿಸಿದ್ದಾರೆ.

ಪಂದ್ಯ: 4

ರನ್: 116

ಗರಿಷ್ಠ: 48

ಬೌಂಡರಿ: 15

ಸಿಕ್ಸರ್: 1

ಸ್ಟ್ರೈಕ್‌ರೇಟ್: 89.23

2. ಬಾಬರ್ ಆಜಂ

ವಯಸ್ಸು: 24

ಬಲಗೈ ಬ್ಯಾಟ್ಸ್‌ಮನ್ ಬಾಬರ್, ಅಮೋಘ ಆಟದ ಮೂಲಕ ಚೊಚ್ಚಲ ವಿಶ್ವಕಪ್ ಅನ್ನು ಸ್ಮರಣೀಯವಾಗಿಸಿಕೊಂಡರು.

ಇಂಗ್ಲೆಂಡ್ ಎದುರಿನ ಹಣಾಹಣಿಯಲ್ಲಿ (ಜೂನ್ 3) ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದ ಅವರು ನಂತರದ ಪಂದ್ಯಗಳಲ್ಲೂ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬೆನ್ನೆಲುಬಾಗಿ ನಿಂತರು.

ಜೂನ್ 26ರಂದು ಬರ್ಮಿಂಗ್‌ಹ್ಯಾಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕ್, ಸೋಲಿನ ಭೀತಿ ಎದುರಿಸಿತ್ತು. ಆಗ ಬಾಬರ್ ಆಪತ್ಭಾಂಧವರಾಗಿದ್ದರು. ನಾಯಕ ಸರ್ಫರಾಜ್ ಅಹಮದ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಅವರು ಅಜೇಯ ಶತಕ (101) ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ಪಂದ್ಯ: 8

ರನ್: 474

ಗರಿಷ್ಠ: 101*

ಶತಕ: 1

ಅರ್ಧಶತಕ: 3

ಬೌಂಡರಿ: 50

ಸಿಕ್ಸರ್: 2

ಸ್ಟ್ರೈಕ್‌ರೇಟ್: 87.77

3. ಆವಿಷ್ಕಾ ಫರ್ನಾಂಡೊ

ವಯಸ್ಸು: 21

ಹದಿನೆಂಟನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆವಿಷ್ಕಾ, ಆಸ್ಟ್ರೇಲಿಯಾ ಎದುರಿನ ಚೊಚ್ಚಲ ಪಂದ್ಯದಲ್ಲೇ (2016 ಆಗಸ್ಟ್) ಶೂನ್ಯಕ್ಕೆ ಔಟಾಗಿದ್ದರು.

ಸ್ಕಾಟ್ಲೆಂಡ್ ಎದುರಿನ ಸರಣಿಯಲ್ಲಿ ಪರಿಣಾಮಕಾರಿ ಆಟ ಆಡಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದ ಅವರಿಗೆ ವಿಶ್ವಕಪ್ ತಂಡದಲ್ಲೂ ಸ್ಥಾನ ಲಭಿಸಿತು. ಈ ಅವಕಾಶವನ್ನು ಆವಿಷ್ಕಾ ಚೆನ್ನಾಗಿಯೇ ಬಳಸಿಕೊಂಡರು.

ವಿಂಡೀಸ್ ಎದುರಿನ ಪಂದ್ಯದಲ್ಲಿ (ಜುಲೈ 1) ಶತಕ ಸಿಡಿಸಿ ಲಂಕಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿಭಾಯಿಸಿದ್ದ ಅವರಿಗೆ ಪಂದ್ಯಶ್ರೇಷ್ಠ ಗೌರವವೂ ಒಲಿದಿತ್ತು. ಆವಿಷ್ಕಾ ಆಟದ ಬಗ್ಗೆ ಹಿರಿಯ ಕ್ರಿಕೆಟಿಗ ಕುಮಾರ ಸಂಗಕ್ಕಾರ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಪಂದ್ಯ: 4

ರನ್: 203

ಗರಿಷ್ಠ: 104

ಶತಕ: 1

ಬೌಂಡರಿ: 23

ಸಿಕ್ಸರ್: 4

ಸ್ಟ್ರೈಕ್‌ರೇಟ್: 105.72

4. ಇಕ್ರಂ ಅಲಿಖಿಲ್

ವಯಸ್ಸು: 18

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎರಡೇ ತಿಂಗಳಲ್ಲಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದ ಅದೃಷ್ಟವಂತ ಇಕ್ರಂ ಅಲಿಖಿಲ್.

ಅಫ್ಗಾನಿಸ್ತಾನದ ಈ ಚಿಗುರು ಮೀಸೆಯ ಹುಡುಗ ಈ ಸಲದ ಟೂರ್ನಿಯಲ್ಲಿ ಭಾರತದ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆ ಮುರಿದು ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದರು.

ವೆಸ್ಟ್ ಇಂಡೀಸ್ ಎದುರಿನ ಅಂತಿಮ ಲೀಗ್ ಪಂದ್ಯದಲ್ಲಿ (ಜುಲೈ 4) ಇಕ್ರಂ, 93 ಎಸೆತಗಳಲ್ಲಿ 86ರನ್ ಸಿಡಿಸಿದ್ದರು. ಈ ಮೂಲಕ ವಿಶ್ವಕಪ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ 18 ವರ್ಷದ ಆಟಗಾರ ಎಂಬ ಹಿರಿಮೆಗೆ ಭಾಜನರಾದರು. ಈ ಸಾಧನೆ ಸಚಿನ್ ಹೆಸರಿನಲ್ಲಿತ್ತು.

ಪಂದ್ಯ: 7

ರನ್: 142

ಗರಿಷ್ಠ: 86

ಅರ್ಧಶತಕ: 1

ಬೌಂಡರಿ: 10

ಸ್ಟ್ರೈಕ್‌ರೇಟ್: 57.72

5. ಇಮಾಮ್ ಉಲ್ ಹಕ್

ವಯಸ್ಸು: 23

ಆಡಿದ ಮೊದಲ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಹಿರಿಮೆ ಇಮಾಮ್ ಅವರದ್ದು. ಈ ಸಾಧನೆ ಮಾಡಿದ ವಿಶ್ವದ 13ನೇ ಆಟಗಾರ. 2017ರಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ಇಮಾಮ್, ಹಿರಿಯ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ಅವರ ಸಂಬಂಧಿ. ಈ ಕಾರಣದಿಂದಲೇ ಅವರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಲಭಿಸಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು. ಲಾರ್ಡ್ಸ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು ಸ್ವ ಸಾಮರ್ಥ್ಯದಿಂದಲೇ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂಬುದನ್ನು ಸಾರಿ ಹೇಳಿದ್ದಾರೆ.

ಪಂದ್ಯ: 8

ರನ್: 305

ಗರಿಷ್ಠ: 100

ಶತಕ: 1

ಅರ್ಧಶತಕ: 1

ಬೌಂಡರಿ: 31

ಸಿಕ್ಸರ್: 1

ಸ್ಟ್ರೈಕ್‌ರೇಟ್: 76.25

6. ನಿಕೋಲಸ್ ಪೂರನ್

ವಯಸ್ಸು: 23

ಚೆಸ್ಟರ್ ಲೀ ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ಜುಲೈ ಒಂದರಂದು ನಡೆದಿದ್ದ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿತ್ತು.

ಈ ಹೋರಾಟದಲ್ಲಿ ವಿಂಡೀಸ್ 23ರನ್‌ಗಳಿಂದ ಸೋತರೂ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದು ನಿಕೋಲಸ್ ಪೂರನ್ ಅವರ ಛಲದ ಆಟ. 103 ಎಸೆತಗಳಲ್ಲಿ 118ರನ್ ಕಲೆಹಾಕಿದ್ದ ಪೂರನ್, ವಿಂಡೀಸ್ ತಂಡವನ್ನು ಐತಿಹಾಸಿಕ ಗೆಲುವಿನ ಸನಿಹ ತಂದು ನಿಲ್ಲಿಸಿದ್ದರು. ಅವರ ಆ ಇನಿಂಗ್ಸ್, ವಿಂಡೀಸ್ ಪಾಳಯದಲ್ಲಿ ಹೊಸ ಚೈತನ್ಯ ಮೂಡಿಸಿತ್ತು.

ಪಂದ್ಯ: 9

ರನ್: 367

ಗರಿಷ್ಠ: 118

ಶತಕ: 1

ಅರ್ಧಶತಕ: 2

ಬೌಂಡರಿ: 33

ಸಿಕ್ಸರ್: 10

ಸ್ಟ್ರೈಕ್‌ರೇಟ್: 100.27

7. ಶಾಹೀನ್ ಅಫ್ರಿದಿ

ವಯಸ್ಸು: 19

ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ (ಆಸ್ಟ್ರೇಲಿಯಾ ಎದುರು) ಎರಡು ವಿಕೆಟ್ ಪಡೆದು ಭರವಸೆ ಮೂಡಿಸಿದ್ದ ತಾರೆ ಶಾಹೀನ್. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲೂ (28ಕ್ಕೆ3) ಅವರು ವಿಕೆಟ್ ಬೇಟೆ ಮುಂದುವರಿಸಿದ್ದರು.

ಅಫ್ಗಾನಿಸ್ತಾನ ವಿರುದ್ಧದ ಹೋರಾಟದಲ್ಲಿ ಅವರು ನಡೆಸಿದ ದಾಳಿ ವಾಸೀಂ ಅಕ್ರಂ ಅವರನ್ನು ನೆನಪಿಸಿತ್ತು. ಆ ಪಂದ್ಯದಲ್ಲಿ ನಾಲ್ಕು ವಿಕೆಟ್ ಬುಟ್ಟಿಗೆ ಹಾಕಿಕೊಂಡ ಅವರು ಬಾಂಗ್ಲಾದೇಶ ವಿರುದ್ಧವೂ ಕೈಚಳಕ ತೋರಿದ್ದರು. 9.1 ಓವರ್‌ಗಳಲ್ಲಿ ಕೇವಲ 35ರನ್ ನೀಡಿ ಆರು ವಿಕೆಟ್ ಉರುಳಿಸಿದ್ದ ಶಾಹೀನ್ ಪಂದ್ಯಶ್ರೇಷ್ಠ ಗೌರವ ಪಡೆದು ಪುಳಕಿತರಾಗಿದ್ದರು.

ಪಂದ್ಯ: 5

ವಿಕೆಟ್: 16

ನೀಡಿದ ರನ್: 234

8. ಒಷೇನ್ ಥಾಮಸ್

ವಯಸ್ಸು: 22

ನಾಟಿಂಗ್‌ಹ್ಯಾಂನಲ್ಲಿ ಮೇ 31ರಂದು ನಡೆದಿದ್ದ ಪಾಕಿಸ್ತಾನದ ಎದುರಿನ ಪಂದ್ಯವನ್ನು ನೆನಪಿಸಿಕೊಳ್ಳಿ. ಅಂದು ಟ್ರೆಂಟ್‌ಬ್ರಿಜ್ ಅಂಗಳದಲ್ಲಿ ಒಷೇನ್, ಅಕ್ಷರಶಃ ಸುಂಟರಗಾಳಿ ಸೃಷ್ಟಿಸಿದ್ದರು. 5.4 ಓವರ್‌ಗಳಲ್ಲಿ 4 ವಿಕೆಟ್ ಉರುಳಿಸಿ ಪಾಕಿಸ್ತಾನದ ಹೆಡೆಮುರಿ ಕಟ್ಟಿದ್ದರು. ಇದರೊಂದಿಗೆ ಪಂದ್ಯಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದರು. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಗಾನಿಸ್ತಾನ ವಿರುದ್ಧದ ಹೋರಾಟಗಳಲ್ಲೂ ಶರವೇಗದ ಸರದಾರನಾಗಿ ಮೆರೆದಿದ್ದ ಜಮೈಕಾದ ಈ ತಾರೆ, ಕೆರಿಬಿಯನ್ನರ ವೇಗದ ಬೌಲಿಂಗ್ ಪರಂಪರೆ ಮುಂದುವರಿಸುವ ಭರವಸೆ ಮೂಡಿಸಿದ್ದಾರೆ.

ಪಂದ್ಯ: 9

ವಿಕೆಟ್: 9

ನೀಡಿದ ರನ್: 380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.