ಕ್ರೈಸ್ಟ್‌ಚರ್ಚ್: ಡೆರಿಲ್ ಮಿಚೆಲ್ ಗಳಿಸಿದ ಶತಕ ಮತ್ತು ಮ್ಯಾಟ್ ಹೆನ್ರಿ ಅವರ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾಗಿದ್ದು ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಐದು ವಿಕೆಟ್‌ಗಳಿಗೆ 162 ರನ್‌ಗಳಿಂದ ಆಟ ಮುಂದುವರಿಸಿದ್ದ ಆತಿಥೇಯ ತಂಡ ಮೂರನೇ ದಿನವಾದ ಶನಿವಾರ 373 ರನ್‌ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 355 ರನ್ ಗಳಿಸಿದ್ದ ಲಂಕಾ, ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 38 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 83 ರನ್ ಕಲೆಹಾಕಿದೆ. ಪ್ರವಾಸಿ ತಂಡ 65 ರನ್‌ಗಳ ಮುನ್ನಡೆಯಲ್ಲಿದೆ.

ಮಿಚೆಲ್ ಮಿಂಚು: ಎರಡನೇ ದಿನ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ನ್ಯೂಜಿಲೆಂಡ್, ಇನಿಂಗ್ಸ್ ಹಿನ್ನಡೆಯ ಆತಂಕಕ್ಕೆ ಸಿಲುಕಿತ್ತು. ಆದರೆ ಮಿಚೆಲ್ (102 ರನ್, 193 ಎ.) ಅವರು ಕೊನೆಯ ಕ್ರಮಾಂಕದ ಬ್ಯಾಟರ್‌ಗಳ ನೆರವಿನಿಂದ ತಂಡಕ್ಕೆ ಇನಿಂಗ್ಸ್ ಮುನ್ನಡೆ ತಂದುಕೊಟ್ಟರು.

40 ರನ್‌ಗಳಿಂದ ಆಟ ಮುಂದುವರಿಸಿದ ಅವರು ಲಂಕಾ ತಂಡದ ವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಮ್ಯಾಟ್ ಹೆನ್ರಿ 75 ಎಸೆತಗಳಲ್ಲಿ 72 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಶ್ರೀಲಂಕಾ 92.4 ಓವರ್‌ಗಳಲ್ಲಿ 355. ನ್ಯೂಜಿಲೆಂಡ್ 107.3 ಓವರ್‌ಗಳಲ್ಲಿ 373 (ಡೆರಿಲ್ ಮಿಚೆಲ್ 102, ಟಿಮ್ ಸೌಥಿ 25, ಮ್ಯಾಟ್ ಹೆನ್ರಿ 72, ನೀಲ್ ವ್ಯಾಗ್ನೆರ್ 27, ಅಸಿತಾ ಫೆರ್ನಾಂಡೊ 85ಕ್ಕೆ 4, ಲಾಹಿರು ಕುಮಾರ 76ಕ್ಕೆ 3). ಎರಡನೇ ಇನಿಂಗ್ಸ್ 38 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 83 (ಒಶಾದ ಫೆರ್ನಾಂಡೊ 28, ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್ 20, ಬ್ಲೇರ್ ಟಿಕ್ನೆರ್ 28ಕ್ಕೆ 3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.