ಮೆಲ್ಬೋರ್ನ್: ರಿಷಭ್ ಪಂತ್ ಅವರು ಮುಂದಿನ ಐಪಿಎಲ್ ಆಡುವ ವಿಶ್ವಾಸದಲ್ಲಿದ್ದಾರೆ. ಆದರೆ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ ಎಂದು ದೆಹಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

‘ಆಡುವ ಬಗ್ಗೆ ರಿಷಭ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಯಾವ ಸಾಮರ್ಥ್ಯದಲ್ಲಿ ಎನ್ನುವುದು ಇನ್ನೂ ಖಚಿತವಾಗಿಲ್ಲ’ ಎಂದು ಪಾಂಟಿಂಗ್ ತಿಳಿಸಿದ್ದಾರೆ.
.ಅಮ್ಮನಿಗೆ ಅಚ್ಚರಿ ನೀಡಲು ಹೊರಟಿದ್ದ ರಿಷಭ್ ಪಂತ್; ಅಪಘಾತಕ್ಕೆ ಕಾರಣ ಏನು?.
‘ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಅವರು ಚೇತರಿಸಿಕೊಂಡಿದ್ದಾರೆ. ಚೆನ್ನಾಗಿ ಓಡುತ್ತಲೂ ಇದ್ದಾರೆ. ಐಪಿಎಲ್‌ನ ಮೊದಲ ಪಂದ್ಯಕ್ಕೆ ಇನ್ನು ಕೇವಲ 6 ವಾರಗಳು ಮಾತ್ರ ಬಾಕಿ ಇದೆ. ಈ ವರ್ಷ ಅವರು ವಿಕೆಟ್ ಕೀಪಿಂಗ್ ಮಾಡುತ್ತಾರೋ ಇಲ್ಲವೋ ಎಂದು ಹೇಳಲಾಗದು’ ಎಂದು ಪಾಂಟಿಂಗ್ ಹೇಳಿದ್ದಾರೆ.

‘ರಿಷಭ್ ಲಭ್ಯರಿರುತ್ತಾರೆ ಎಂದು ನಾವು ಆಶಿಸುತ್ತೇವೆ. ಎಲ್ಲಾ ಪಂದ್ಯಕ್ಕೆ ಅಲ್ಲದಿದ್ದರೂ 14ರಲ್ಲಿ 10 ಪಂದ್ಯ ಆಡಿದರೂ ನಮಗೆ ಅದು ನಮಗೆ ಲಾಭವಾಗಲಿದೆ’ ಎಂದು ಹೇಳಿದ್ದಾರೆ.
.ಮುಂದಿನ ಐಪಿಎಲ್ನಲ್ಲಿ ರಿಷಭ್ ಪಂತ್ ಆಡಲಿದ್ದಾರೆ: ಸೌರವ್ ಗಂಗೂಲಿ.
ಅವರ ಬಳಿ ಕೇಳಿದರೆ ಎಲ್ಲಾ ಪಂದ್ಯ ಆಡುವುದಾಗಿಯೂ, ಎಲ್ಲಾ ಪಂದ್ಯದಲ್ಲಿ ಕೀಪಿಂಗ್ ಮಾಡುವುದಾಗಿಯೂ, ನಾಲ್ಕನೇ ಕ್ರಮಾಂಕದಲ್ಲಿ ಆಡುವುದಾಗಿಯೂ ಹೇಳುತ್ತಾರೆ. ಅವರು ಇರುವುದೇ ಹಾಗೆ. ಅವರೊಬ್ಬ ಚುರುಕಿನ ಆಟಗಾರ’ ಎಂದು ನುಡಿದಿದ್ದಾರೆ.

2022ರ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.