ಲಾಹೋರ್: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲು ಉದ್ದೇಶಿಸಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಸ್ಥಳ ಅಂತಿಮಗೊಳಿಸಿದೆ.

ಭಾರತದ ಪಾಲ್ಗೊಳ್ಳುವಿಕೆ ಖಚಿತಪಡಿಸುವ ನಿಟ್ಟಿನಲ್ಲಿ ಹೈಬ್ರಿಡ್ ಮಾಡೆಲ್ ಮೂಲಕ ಬೇರೆಡೆ ಟೂರ್ನಿ ನಡೆಸಬಹುದು ಎಂಬ ವದಂತಿಗಳ ನಡುವೆಯೇ ಚಾಂಪಿಯನ್ಸ್ ಟ್ರೋಫಿ ನಡೆಸಲು ಸ್ಥಳಗಳನ್ನು ಪಿಸಿಬಿ ಗುರುತಿಸಿದೆ.

ಈ ಹಿಂದೆ 2017ರಲ್ಲಿ ಇಂಗ್ಲೆಂಡ್‌ನಲ್ಲಿ ಟೂರ್ನಿ ನಡೆದಿತ್ತು. ಮುಂದಿನ ವರ್ಷ ಫೆಬ್ರುವರಿ–ಮಾರ್ಚ್ ತಿಂಗಳಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಕುರಿತಂತೆ ಭಾರತವು ಇನ್ನೂ ಖಚಿತಪಡಿಸಿಲ್ಲ. ಭಾರತ ಸರ್ಕಾರವು ತಂಡವು ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡದಿದ್ದರೆ ಐಸಿಸಿಯು ಹೈಬ್ರಿಡ್ ಮಾಡೆಲ್ ಮೂಲಕ ತಟಸ್ಥ ಸ್ಥಳದಲ್ಲಿ ಭಾರತ ತಂಡದ ಪಂದ್ಯಗಳನ್ನು ಆಯೋಜಿಸಲಿದೆ ಎಂದು ವದಂತಿ ಹಬ್ಬಿತ್ತು. ಸರ್ಕಾರದ ನೀತಿಗಳ ವಿರುದ್ಧ ಹೋಗುವಂತೆ ಯಾವುದೇ ಕ್ರಿಕೆಟ್ ಮಂಡಳಿಗೆ ನಾವು ಸೂಚಿಸುವುದಿಲ್ಲ ಎಂದು ಐಸಿಸಿ ಈಗಾಗಲೇ ಸ್ಪಷ್ಟಪಡಿಸಿದೆ.

‘ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿದ್ದೇವೆ’ಎಂದು ಪಿಸಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಐಸಿಸಿ ಭದ್ರತಾ ತಂಡವೂ ಬಂದಿತ್ತು. ನಾವು ಅವರ ಜೊತೆ ಸಭೆ ನಡೆಸಿದ್ದೇವೆ. ಇಲ್ಲಿನ ತಯಾರಿ ಬಗ್ಗೆ ಅವರು ಪರಿಶೀಲನೆ ನಡೆಸಿದ್ದಾರೆ. ಕ್ರೀಡಾಂಗಣದ ಉನ್ನತೀಕರಣದ ಮಾಹಿತಿಯನ್ನೂ ನಾವು ಅವರೊಂದಿಗೆ ಹಂಚಿಕೊಳ್ಳಲಿದ್ದೇವೆ’ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದ ಅನುಕೂಲಕ್ಕಾಗಿ ಪಂದ್ಯಾವಳಿ ನಡೆಸುವ ಸ್ಥಳ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂಬಂತೆ ಪಿಸಿಬಿ ವರ್ತಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಕಳೆದ ವರ್ಷ ನಡೆದ ಏಷ್ಯಾ ಕಪ್‌ನಲ್ಲಿ ಹೈಬ್ರಿಡ್ ಮಾಡೆಲ್ ಬಳಸಲಾಗಿತ್ತು. ಪಾಕಿಸ್ತಾನವು ಸರಣಿಯ ಅಧಿಕೃತ ಆತಿಥ್ಯ ವಹಿಸಿದ್ದರೂ ಸಹ ಜಯ್ ಶಾ ನೇತೃತ್ವದ ಏಷ್ಯಾ ಕ್ರಿಕೆಟ್ ಮಂಡಳಿಯು ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.