ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹಿರಿಯ ಆಟಗಾರ ರಿಕಿ ಪಾಂಟಿಂಗ್ ಬುಧವಾರ ಐಸಿಸಿ ‘ಹಾಲ್ ಆಫ್ ಫೇಮ್’ ಗೌರವ ಸ್ವೀಕರಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ಚಹಾ ವಿರಾಮದ ವೇಳೆಯಲ್ಲಿ ಗ್ಲೆನ್ ಮೆಕ್ಗ್ರಾಥ್ ಅವರು ಪಾಂಟಿಂಗ್ಗೆ ‘ಹಾಲ್ ಆಫ್ ಫೇಮ್’ ಕ್ಯಾಪ್ ನೀಡಿದರು.

ಈ ವರ್ಷದ ಜುಲೈ ತಿಂಗಳಿನಲ್ಲಿ ಪಾಂಟಿಂಗ್, ಭಾರತದ ರಾಹುಲ್ ದ್ರಾವಿಡ್ ಮತ್ತು ಇಂಗ್ಲೆಂಡ್ ಮಹಿಳಾ ತಂಡದ ವಿಕೆಟ್ ಕೀಪರ್ ಕ್ಲೇರಾ ಟೇಲರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಡಬ್ಲಿನ್ನಲ್ಲಿ ನಡೆದಿದ್ದ ಐಸಿಸಿ ವಾರ್ಷಿಕ ಸಭೆಯ ವೇಳೆ ಪಾಂಟಿಂಗ್ ಹಾಜರಾಗಿರಲಿಲ್ಲ. ಹೀಗಾಗಿ ಅವರಿಗೆ ಈಗ ಪುರಸ್ಕಾರ ನೀಡಲಾಗಿದೆ.

44 ವರ್ಷ ವಯಸ್ಸಿನ ಪಾಂಟಿಂಗ್ 2012ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. 168 ಟೆಸ್ಟ್ ಪಂದ್ಯಗಳನ್ನಾಡಿದ್ದ ಅವರು 13,378ರನ್ ಗಳಿಸಿದ್ದರು. ಇದರಲ್ಲಿ 41 ಶತಕ ಸೇರಿದ್ದವು. 375 ಏಕದಿನ ಪಂದ್ಯಗಳಿಂದ 13,704ರನ್ ಕಲೆಹಾಕಿದ್ದರು. 17 ಟ್ವೆಂಟಿ–20 ಪಂದ್ಯಗಳನ್ನು ಆಡಿ 401ರನ್ ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.